February 19, 2026
Thursday, February 19, 2026
spot_img

ಟೆಕ್ಸಾಸ್‌ನಲ್ಲಿ ಹನುಮಂತ ಪ್ರತಿಮೆ | ‘ಇದು ಪಾಕಿಸ್ತಾನ ಭಾರತವಲ್ಲ, ಅತಿಕ್ರಮಣ ನಿಲ್ಲಿಸಿ’ ಎಂದ MAGA ನಾಯಕ

ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿರುವ ಭಾರೀ ಹನುಮಂತ ಪ್ರತಿಮೆಯನ್ನು ಉಲ್ಲೇಖಿಸಿ ರಿಪಬ್ಲಿಕನ್ ನಾಯಕನೊಬ್ಬ ಮಾಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಡಲ್ಲಾಸ್–ಫೋರ್ಟ್ ವರ್ತ್ ಪ್ರದೇಶದ ರಾಜಕೀಯ ಕಾರ್ಯಕರ್ತ ಕಾರ್ಲೋಸ್ ಟರ್ಸಿಯೊಸ್, ಶುಗರ್ ಲ್ಯಾಂಡ್‌ನಲ್ಲಿರುವ ಶ್ರೀ ಅಷ್ಟಲಕ್ಷ್ಮಿ ದೇವಸ್ಥಾನದ ಆವರಣದ 90 ಅಡಿ ಎತ್ತರದ ಹನುಮಂತ ಮೂರ್ತಿಯ ವಿಡಿಯೋ ಹಂಚಿಕೊಂಡು ವಲಸಿಗರ ಕುರಿತು ಕಠಿಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

“ಇದು ಪಾಕಿಸ್ತಾನ ಅಥವಾ ಭಾರತವಲ್ಲ, ಟೆಕ್ಸಾಸ್. ಮೂರನೇ ಜಗತ್ತಿನ ವಿದೇಶಿಯರು ಅಮೆರಿಕವನ್ನು ಆಕ್ರಮಿಸುತ್ತಿದ್ದಾರೆ” ಎಂಬ ಆಶಯದ ಹೇಳಿಕೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದು ಟೀಕೆಗೆ ಗುರಿಯಾಗಿದೆ. 2024ರಲ್ಲಿ ಅನಾವರಣಗೊಂಡ ಪಂಚಲೋಹ ಅಭಯ ಹನುಮಂತ ಪ್ರತಿಮೆ, ಯುನೈಟೆಡ್ ಸ್ಟೇಟ್ಸ್ ನಲ್ಲಿ ಅತಿ ಎತ್ತರದ ಹಿಂದು ಸ್ಮಾರಕಗಳಲ್ಲಿ ಒಂದಾಗಿದೆ. ಇದರ ಪರಿಕಲ್ಪನೆಗೆ ಶ್ರೀ ಚಿನ್ನಜೀಯರ್ ಸ್ವಾಮೀಜಿ ಪ್ರೇರಣೆಯಾಗಿದ್ದಾರೆ ಎಂದು ದೇವಾಲಯ ಮೂಲಗಳು ತಿಳಿಸಿವೆ.

ಈ ಹೇಳಿಕೆಯನ್ನು ಅನೇಕರು ಅನ್ಯದ್ವೇಷಕ್ಕೆ ಉತ್ತೇಜನವೆಂದು ಟೀಕಿಸಿದ್ದಾರೆ. ವಲಸಿಗರು ಹಾಗೂ ಧಾರ್ಮಿಕ ಸಮುದಾಯಗಳು ಅಮೆರಿಕದ ಸಾಮಾಜಿಕ ಹಾಗೂ ಸಾಂಸ್ಕೃತಿಕ ವಲಯಕ್ಕೆ ನೀಡಿರುವ ಕೊಡುಗೆಗಳನ್ನು ನೆನಪಿಸಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !