ಹೊಸದಿಗಂತ ಡಿಜಿಟಲ್ ಡೆಸ್ಕ್:
ಆದಿಪುರುಷ ಸಿನಿಮಾ ತೆರೆಗೊಂಡ ಬಳಿಕ ಒಂದಲ್ಲ ಒಂದು ವಿವಾದದಲ್ಲಿ ಸಿಲುಕಿಗೊಂಡಿದ್ದು, ಇದೀಗ ಚಿತ್ರದ ವಿವಾದಾತ್ಮಕ ಸಂಭಾಷಣೆಗಳನ್ನು ಚಿತ್ರತಂಡ ಬದಲಾಯಿಸಿದೆ.
ಲಂಕಾ ದಹನ ದೃಶ್ಯದ ವೇಳೆ ಹನುಮಂತನನ್ನು ಉದ್ದೇಶಿಸಿ ‘ಕಪ್ಡಾ ತೇರಾ ಬಾಪ್ ಕಾ, ಟೆಲ್ ತೆರಾ ಬಾಪ್ ಕಾ, ಆಗ್ ಭಿ ತೇರೆ ಬಾಪ್ ಕಿ ಔರ್ ಜಲೇಗಿ ಭೀ ತೆರೆ ಬಾಪ್ ಕಿ’ ಎಂದು ಬರೆದಿದ್ದ ಸಂಭಾಷಣೆಯಲ್ಲಿ ‘ಬಾಪ್’ (ಅಪ್ಪ) ಎಂಬ ಪದ ಇದ್ದಲ್ಲೆಲ್ಲ ‘ಲಂಕಾ’ ಎಂಬ ಪದದೊಂದಿಗೆ ಬದಲಾಯಿಸಲಾಗಿದೆ. ಇದೀಗ ನೂತನ ಸಂಭಾಷನೆಯೊಂದಿಗೆ ಚಿತ್ರ ಪ್ರದರ್ಶನಗೊಳ್ಳುತ್ತದೆ.
ಚಿತ್ರದಲ್ಲಿ ಹನುಮಂತನಿಗೆ ಅವಮಾನ ಮಾಡಲಾಗಿದ್ದು, ಭಕ್ತರ ಭಾವನೆಗೆ ಧಕ್ಕೆ ಉಂಟಾಗಿದೆ. ಚಿತ್ರದಲ್ಲಿ ‘ಟಪೋರಿ’ ರೀತಿಯ ತೀರಾ ತಳಮಟ್ಟದ ಸಂಭಾಷಣೆ ಬಳಸಲಾಗಿದ ಎಂದು ದೇಶಾದ್ಯಂತ ಸಂಭಾಷಣೆಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಸಂಭಾಷಣೆ ಬದಲಾಯಿಸುವುದಾಗಿ ಚಿತ್ರತಂಡ ಹೇಳಿತ್ತು. ಓಂ ರಾವತ್ ನಿರ್ದೇಶಿಸಿರುವ ಚಿತ್ರದಲ್ಲಿ ನಟ ಪ್ರಭಾಸ್ ರಾಮ, ನಟಿ ಕೃತಿ ಸನೂನ್ ಸೀತಾ ಮಾತೆ ಮತ್ತು ನಟ ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ.