ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇತ್ತ ರಶ್ಮಿಕಾಗೆ ಸಖತ್ ಹೆಸರು ಕೊಟ್ಟ ಪುಷ್ಪ-೨ ಸಿನಿಮಾ ಕಡೆಯಿಂದ ಹೊಸ ಅಪ್‌ಡೇಟ್ ಸಿಕ್ಕಿದೆ.
ರಶ್ಮಿಕಾ ಹಾಗೂ ಅಲ್ಲು ಅರ್ಜುನ್ ನಟನೆಯ ಸಿನಿಮಾದಲ್ಲಿ ನಟಿ ಶ್ರೀವಲ್ಲಿ ಪಾತ್ರದಲ್ಲಿ ಮಿಂಚಲಿದ್ದಾರೆ, ಇತ್ತೀಚೆಗಷ್ಟೇ ಫಸ್ಟ್ ಲುಕ್ ರಿಲೀಸ್ ಆಗಿತ್ತು. ಇದೀಗ ಪುಷ್ಪದ ಎನರ್ಜಿಟಿಕ್ ಹಾಡು ಬಿಡುಗಡೆ ಮಾಡಲಾಗುವುದು ಎಂದು ರಶ್ಮಿಕಾ ಅಪ್‌ಡೇಟ್ ಕೊಟ್ಟಿದ್ದಾರೆ.
ಹಾಡನ್ನು ಶೂಟ್ ಮಾಡುವಾಗ ನಾನು ಫುಲ್ ಖುಷಿಪಟ್ಟಿದ್ದೇನೆ, ನಾಳೆ ನಿಮಗೂ ಅಷ್ಟೇ ಖುಷಿಯಾಗಲಿ ಎಂದು ಅಂದುಕೊಳ್ತೇನೆ ಎಂದು ರಶ್ಮಿಕಾ ಹೇಳಿದ್ದಾರೆ.
This song was a BLAST to shoot ☄️ I am sure you guys are going to love it ❤️ so excited!! 💃🏻#Pushpa2TheRule @alluarjun @aryasukku #FahadhFaasil @ThisIsDSP @SukumarWritings @MythriOfficial @TSeries pic.twitter.com/kMbnH71UY8
— Rashmika Mandanna (@iamRashmika) May 22, 2024