ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಜಾಮೀನು ಸಿಕ್ಕಿದೆ ಅಂತ ಗೊತ್ತಾಗಿದೆ. ಅಪ್ತರಾಗಿದ್ದರು ಖುಷಿಯಾಗಿದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಇಂದು(ಬುಧವಾರ) ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ನ್ಯಾಯಾಲಯದಲ್ಲಿ ದರ್ಶನ್ ಗೆ ಬೇಲ್ ಆಗಿದೆ. ಆತ್ಮೀಯರು ಇರೋ ಕಾರಣಕ್ಕಾಗಿ ಖುಷಿಯಾಗಿದೆ. ಸಹಜವಾಗಿಯೇ ಖುಷಿಯಾಗಿದೆ. ನಾನು ದರ್ಶನ್ ಈ ಘಟನೆ ಆಗೋ ಮುಂಚೆ ಪ್ರತಿ ತಿಂಗಳು ಎರಡು ಸಲ ಭೇಟಿಯಾಗುತ್ತಿದ್ದವು. ಈಗ ಹೋಗಿ ಆರೋಗ್ಯ ವಿಚಾರಿಸುತ್ತೇನೆ ಎಂದು ಹೇಳಿದ್ದಾರೆ.