ಮೇಘಾ, ಬೆಂಗಳೂರು
ಬೆಳಗಿನ ಸೂರ್ಯೋದಯದಿಂದ ರಾತ್ರಿ ಮಲಗುವವರೆಗೂ, ಹೆಣ್ಣು ತನ್ನ ಜೀವನದ ಪ್ರತಿ ಕ್ಷಣವನ್ನೂ ಇತರರಿಗಾಗಿ ಮೀಸಲಿಡುತ್ತಾಳೆ. ಅವಳು ತಾಯಿ, ಸಹೋದರಿ, ಪತ್ನಿ, ಸ್ನೇಹಿತೆ, ಮತ್ತು ವೃತ್ತಿಪರಳು. ಈ ಎಲ್ಲಾ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುವ ಅವಳ ಸಾಮರ್ಥ್ಯ ನಿಜಕ್ಕೂ ಅದ್ಭುತ.
ಹಳ್ಳಿಗಳಲ್ಲಿ, ಅವಳು ಬೆಳಿಗ್ಗೆ ಎದ್ದು ಮನೆ ಕೆಲಸಗಳನ್ನು ಮುಗಿಸಿ, ಹೊಲದಲ್ಲಿ ದುಡಿಯುತ್ತಾಳೆ. ನಗರಗಳಲ್ಲಿ, ಅವಳು ಕಚೇರಿಗೆ ಹೋಗಿ, ಮನೆಗೆ ಬಂದ ನಂತರ ಮಕ್ಕಳ ಆರೈಕೆ ಮತ್ತು ಅಡುಗೆ ಮಾಡುತ್ತಾಳೆ. ಅವಳ ಸಹನೆ ಮತ್ತು ತ್ಯಾಗ ನಿಜ್ಜಕ್ಕೂ ಅಪಾರ.
ಹೆಣ್ಣು ಕೇವಲ ಮನೆಯಲ್ಲಷ್ಟೇ ಅಲ್ಲ, ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪನ್ನು ಮೂಡಿಸಿದ್ದಾಳೆ. ವಿಜ್ಞಾನ, ತಂತ್ರಜ್ಞಾನ, ಕಲೆ, ಸಾಹಿತ್ಯ, ರಾಜಕೀಯ ಹೀಗೆ ಯಾವುದೇ ಕ್ಷೇತ್ರವಿರಲಿ, ಹೆಣ್ಣು ತನ್ನ ಪ್ರತಿಭೆಯಿಂದ ಜಗತ್ತಿಗೆ ಮಾದರಿಯಾಗಿದ್ದಾಳೆ.
ಆದರೆ, ಹೆಣ್ಣು ಎದುರಿಸುವ ಸವಾಲುಗಳು ಕೂಡಾ ಹೆಚ್ಚಾಗಿವೆ. ಲಿಂಗ ತಾರತಮ್ಯ, ಹಿಂಸೆ, ಅವಕಾಶಗಳ ಕೊರತೆ ಹೀಗೆ ಅನೇಕ ಸಮಸ್ಯೆಗಳು ಅವಳನ್ನು ಕಾಡುತ್ತಿವೆ. ಈ ಎಲ್ಲಾ ಅಡೆತಡೆಗಳನ್ನು ದಾಟಿ, ತನ್ನ ಗುರಿಯನ್ನು ಸಾಧಿಸುವ ಛಲ ಅವಳಲ್ಲಿದೆ.
ಹೆಣ್ಣಿನ ಶಕ್ತಿ ಮತ್ತು ಸಾಧನೆಗಳನ್ನು ಗುರುತಿಸಿ, ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಅವಳಿಗೆ ಸಮಾನ ಅವಕಾಶಗಳನ್ನು ನೀಡಿ, ಅವಳನ್ನು ಬೆಂಬಲಿಸುವುದು ಸಮಾಜದ ಪ್ರಗತಿಗೆ ಅತ್ಯಗತ್ಯ. ಹೆಣ್ಣು ಸಬಲಳಾದರೆ, ಸಮಾಜ ಸಬಲವಾಗುತ್ತದೆ.
ಹೆಣ್ಣು, ನಿಜಕ್ಕೂ ಶಕ್ತಿ ಸ್ವರೂಪಿಣಿ. ಅವಳ ಸಹನೆ, ತ್ಯಾಗ, ಮತ್ತು ಸಾಧನೆಗಳು ನಮಗೆಲ್ಲರಿಗೂ ಪ್ರೇರಣೆ ಅಂದ್ರೆ ನಿಜಕ್ಕೂ ತಪ್ಪಿಲ್ಲ.