ಹರ್​ ಘರ್ ತಿರಂಗ: ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸಲು ಪ್ರಧಾನಿ ಮೋದಿ ಕರೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ ವರ್ಷ ಆರಂಭಿಸಿದ್ದ ಹರ್​ ಘರ್ ತಿರಂಗ ಅಭಿಯಾನ ಈ ವರ್ಷವೂ ಮುಂದುವರಿಯಿಸಲು ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಇಂದು ಕರೆ ನೀಡಿದ್ದಾರೆ.

ರಾಷ್ಟ್ರಧ್ವಜವು ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಏಕತೆಯನ್ನು ಸಂಕೇತಿಸುತ್ತದೆ.ಪ್ರತಿ ಭಾರತೀಯನೂ ರಾಷ್ಟ್ರಧ್ವಜದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾನೆ. ದೇಶದ ಪ್ರಗತಿಗೆ ಇನ್ನಷ್ಟು ಪರಿಶ್ರಮ ವಹಿಸುವ ನಿಟ್ಟಿನಲ್ಲಿ ರಾಷ್ಟ್ರಧ್ವಜ ನಮಗೆ ಸ್ಫೂರ್ತಿ ಎಂದು ಪ್ರಧಾನಿ ಮೋದಿ ಹೇಳಿಕೊಂಡಿದ್ದಾರೆ.

ಈ ವರ್ಷವೂ ಎಲ್ಲರೂ ಹರ್ ಘರ್ ತಿರಂಗ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಇದೇ ಆ. 13ರಿಂದ ಆ. 15ರ ಅವಧಿಯಲ್ಲಿ ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸುವ ಮೂಲಕ ಈ ಅಭಿಯಾನದಲ್ಲಿ ಪಾಲ್ಗೊಳ್ಳಿ. ರಾಷ್ಟ್ರಧ್ವಜದೊಂದಿಗೆ ನಿಮ್ಮ ಚಿತ್ರವನ್ನು ವೆಬ್​ಸೈಟ್​​ನಲ್ಲಿ ಅಪ್​ಲೋಡ್ ಮಾಡುವಂತೆಯೂ ಪ್ರಧಾನಿ ಮೋದಿ ಮನವಿ ಮಾಡಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!