ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ವರ್ಷ ಪ್ರಾರಂಭವಾಗಿದ್ದ ʻಹರ್ ಘರ್ ತಿರಂಗʼ ಅಭಿಯಾನವನ್ನು ಈ ವರ್ಷವೂ ಮುಂದುವರಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದ್ದರು. ಆಗಸ್ಟ್ 13ರಿಂದ ಆ. 15ರವರೆಗೆ ನಿಮ್ಮ ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸುವ ಮೂಲಕ ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ಮನವಿ ಮಾಡಿದ್ದರು. ಅದರಂತೆ ಇದು ದೇಶದ ವಿವಿಧೆಡೆ ಈ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ಹಲವೆಡೆ ಚಾಲನೆ ದೊರೆತಿದೆ.
ಶ್ರೀನಗರ: ಶ್ರೀನಗರದಲ್ಲಿ ‘ಮೇರಿ ಮಾತಿ ಮೇರಾ ದೇಶ್’ ಅಭಿಯಾನದಡಿಯಲ್ಲಿ ಪೊಲೀಸರು ಆಯೋಜಿಸಿದ್ದ ‘ಹರ್ ಘರ್ ತಿರಂಗ’ ರ್ಯಾಲಿಯಲ್ಲಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ದೆಹಲಿ: ಕೇಂದ್ರ ಸಚಿವೆ ಮೀನಕಾಶಿ ಲೇಖಿ ದೆಹಲಿಯಲ್ಲಿ ‘ತಿರಂಗಾ ರ್ಯಾಲಿ’ಗೆ ಚಾಲನೆ ನೀಡಿದರು. ‘ಸ್ವಾತಂತ್ರ್ಯ ದಿನವು ಹತ್ತಿರದಲ್ಲಿದೆ ಮತ್ತು ಜನರು ಆಚರಣೆಯ ಬಗ್ಗೆ ಉತ್ಸಾಹದಿಂದ ಇದ್ದಾರೆ. ಪ್ರಧಾನಿಯವರು ಹೇಳಿದಂತೆ ‘ಅಮೃತ್ ಕಾಲ’ ಪ್ರಾರಂಭವಾಗುತ್ತಿದೆ. ಯಶಸ್ಸಿನ ಉತ್ತುಂಗಕ್ಕಾಗಿ ನಾವೆಲ್ಲರೂ ಪೂರ್ಣ ಶಕ್ತಿಯಿಂದ ಈ ದಿಕ್ಕಿನಲ್ಲಿ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಇದು ಸಾಧ್ಯ ಎಂದರು.
ಜಮ್ಮು-ಕಾಶ್ಮೀರ: ಇಲ್ಲಿಯ ಡಿಜಿಪಿ ಕೆ, ದಿಲ್ಬಾಗ್ ಸಿಂಗ್ ಹಾಗೂ ಪೊಲೀಸ್ ಸಿಬ್ಬಂದಿ ಕೂಡ ಹರ್ ಘರ್ ತಿರಂಗ ಅಭಿಯಾನದಲ್ಲಿ ಭಾಗಿಯಾದರು. ಬಳಿಕ ಮಾತನಾಡಿದ ಅವರು, “ನಾವು ಇಂದು ‘ತಿರಂಗಾ ರ್ಯಾಲಿ’ಯ ಭಾಗವಾಗಿದ್ದೇವೆ ಎಂಬುದಕ್ಕೆ ನಮಗೆ ಹೆಮ್ಮೆ ಇದೆ. ಈ ವರ್ಷದ ರ್ಯಾಲಿ ಕಳೆದ ವರ್ಷಕ್ಕಿಂತ ದೊಡ್ಡದಾಗಿದೆ. ನಾವು ರಾಷ್ಟ್ರದ ಶಾಂತಿಗಾಗಿ ಒಟ್ಟಾಗಿ ಕೆಲಸ ಮಾಡಲು ಬಯಸುತ್ತೇವೆ. ಸ್ವಾತಂತ್ರ್ಯ ದಿನಾಚರಣೆಗಾಗಿ ಅಗತ್ಯವಿರುವ ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ” ಎಂದರು.
ಜಮ್ಮು ಮತ್ತು ಕಾಶ್ಮೀರ: ಎಲ್ಜಿ ಮನೋಜ್ ಸಿನ್ಹಾ ನೇತೃತ್ವದಲ್ಲಿ ತಿರಂಗಾ ರ್ಯಾಲಿ ನಡೆದಿದೆ. ದಾಲ್ ಸರೋವರದ ದಡದಲ್ಲಿರುವ SKICC ಯಿಂದ ಬೊಟಾನಿಕಲ್ ಗಾರ್ಡನ್ ವರೆಗೆ ತಿರಂಗಾ ರ್ಯಾಲಿಯಲ್ಲಿ ಭಾಗಿಯಾದರು. ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿಯಾಗಿ ಬಿಗಿ ಭದ್ರತೆಯನ್ನು ಮಾಡಲಾಗಿದೆ ಎಂದು ಕಾಶ್ಮೀರ ಎಡಿಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.