ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯರ ಸಬಲೀಕರಣಕ್ಕಾಗಿ, ರಾಜ್ಯ ಸರ್ಕಾರ ಶಕ್ತಿ ಯೋಜನೆ ಪರಿಚಯಿಸಿದೆ. ಆದರೆ, ಶಕ್ತಿ ಯೋಜನೆಗಾಗಿ ಹಗಲಿರುಳು ದುಡಿಯುವ ಕೆಎಸ್‌ಆರ್‌ಟಿಸಿ ಮಹಿಳಾ ಕಂಡಕ್ಟರ್ಗಳಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿದೆ.
ದೀಪಾಂಜಲಿ ನಗರದ KSRTC ಡಿಪೋ 5ರ ಕಂಡಕ್ಟರ್ ಮಂಜಮ್ಮ ತಮ್ಮ ಋತುಚಕ್ರದ ಸಮಸ್ಯೆಗಳ ನಡುವೆಯೂ ಅಧಿಕಾರಿಗಳು ಕೆಲಸ ಮಾಡಿ ಅಂತಾರೆ, ಎಂದು ತಮ್ಮ ನೋವನ್ನು ವಿಡಿಯೋ ಮೂಲಕ ತಿಳಿಸಿ ಕಣ್ಣೀರಿಟ್ಟಿದ್ದಾರೆ.
ಸಿಟಿಎಂ ಅಂತೋಣಿ ಜಾರ್ಜ್ ಅವರ ಬಳಿ ಹೋಗಿ ಅಧಿಕಾರಿಗಳು ಹೀಗೆ ಹಿಂಸೆ ನೀಡುತ್ತಿದ್ದಾರೆ ಎಂದು ಹೇಳಿದರೆ ಬಹಳ ಕಟುವಾದ ಮಾತುಗಳನ್ನು ಆಡುತ್ತಾರೆ ಎಂದು ಮಹಿಳಾ ಕಂಡಕ್ಟರ್ ಹೇಳಿದ್ದಾರೆ.
ಇನ್ನು ಅಧಿಕಾರಿಗಳ ಚಿತ್ರಹಿಂಸೆ ಕುರಿತು ಮಂಜಮ್ಮ ಅವರು ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಡಿ ಅವರಿಗೆ ದೀಪಾಂಜಲಿ ನಗರದ ಡಿಪೋ 5ರ 44 ಜನರ ಸಹಿ ಹಾಕಿ ಈ ಸಮಸ್ಯೆಯ ಕುರಿತು ಪತ್ರ ಬರೆದಿದ್ದಾರೆ.