ಯುವಿ, ರೈನಾ, ಬಜ್ಜಿ ಡಾನ್ಸ್ ನಿಂದ ವಿಕಲಚೇತನರಿಗೆ ಅವಮಾನ ಆರೋಪ: ಕ್ಷಮೆ ಕೋರಿದ ಹರ್ಭಜನ್​ ಸಿಂಗ್​!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಮ್ ಇಂಡಿಯಾ ಲೆಜೆಂಡ್ಸ್ ವಿಶ್ವ ಕಪ್​ ಗೆದ್ದ ಖುಷಿಯಲ್ಲಿ ವಿಕಲಚೇತನರ ರೀತಿ ಡಾನ್ಸ್​ ಮಾಡಿದ್ದು, ಬಾರಿ ಟೀಕೆಗಳು ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಭಾರತ ತಂಡದ ಮಾಜಿ ಸ್ಪಿನ್ನರ್​​ ಹರ್ಭಜನ್​ ಸಿಂಗ್ ಕ್ಷಮೆ ಕೋರಿದ್ದಾರೆ.

ಪ್ಯಾರಾ ಬ್ಯಾಡ್ಮಿಂಟನ್ ತಾರೆ ಮಾನಸಿ ಜೋಶಿ ಅವರು, ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ಅವರ ಕ್ರಮವನ್ನು ಟೀಕಿಸಿದ್ದರು. ವಿಶ್ವ ಚಾಂಪಿಯನ್​ಶಿಪ್​ ಆಫ್ ಲೆಜೆಂಡ್ಸ್​ನಲ್ಲಿ ಜಯಗಳಿಸಿದ ನಂತರ ಭಾರತ ಚಾಂಪಿಯನ್ಸ್ ನಾಯಕ ಸಾಮಾಜಿಕ ಮಾಧ್ಯಮದಲ್ಲಿ ಉಲ್ಲಾಸದ ವೀಡಿಯೊ ಹಂಚಿಕೊಂಡಿದ್ದರು. ಅದರಲ್ಲಿ ಯುವರಾಜ್ ಸಿಂಗ್, ರೈನಾ, ಹರ್ಭಜನ್ ಸಿಂಗ್ ಮತ್ತು ಗುರ್ಕೀರತ್ ಸಿಂಗ್ ಕುಂಟುತ್ತಾ ಡಾನ್ಸ್ ಮಾಡಿದ್ದರು. ಇದು ಟೀಕೆಗೆ ಒಳಗಾಯಿತು.

15 ದಿನಗಳ ಲೆಜೆಂಡ್ಸ್ ಕ್ರಿಕೆಟ್​ ಬಳಿಕ ದೇಹದ ಪ್ರತಿಯೊಂದು ಭಾಗವೂ ನೋಯುತ್ತಿದೆ ಎಂಬ ಅರ್ಥದ ಹಾಡಿಗೆ ಡಾನ್ಸ್ ಮಾಡಿದ್ದರು. ಅದನ್ನು ವಿಕ್ಕಿ ಕೌಶಲ್ ಮತ್ತು ಗಾಯಕ ಕರಣ್ ಔಜ್ಲಾ ಗೆ ಟ್ಯಾಗ್ ಮಾಡಿದ್ದರು. ಸತತ ಕ್ರಿಕೆಟ್ ವೇಳಾಪಟ್ಟಿಯು ನಮ್ಮ ದೇಹದ ಮೇಲೆ ಪರಿಣಾಮ ಬೀರಿದೆ. ನಮ್ಮ ದೇಹದ ಭಾಗಗಳು ನೋಯುತ್ತಿವೆ ಎಂದು ಭಾರತದ ಮಾಜಿ ಆಟಗಾರ ವಿವರಿಸಿದ್ದರು. ಆದಾಗ್ಯೂ, ಮಾನಸಿ ಜೋಶಿ ಅವರು ಆಟಗಾರರನ್ನು ಟೀಕಿಸಿದ್ದರು. ಅಲ್ಲದೆ, ದೈಹಿಕವಾಗಿ ವಿಶೇಷಚೇತನರನ್ನು ಅಣಕಿಸದಂತೆ ಕೋರಿಕೊಂಡಿದ್ದರು.

https://x.com/adityasvlogs/status/1812701915664556135?ref_src=twsrc%5Etfw

ಕ್ಷಮೆ ಕೋರಿದ ಹರ್ಭಜನ್​ ಸಿಂಗ್
ಹರ್ಭಜನ್ ಸಿಂಗ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯದ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದರು ಮತ್ತು ಆಟಗಾರರು ಯಾರ ಭಾವನೆಗಳನ್ನು ನೋಯಿಸಲು ಬಯಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇಂಗ್ಲೆಂಡ್​ನಲ್ಲಿ ನಡೆದ ಉದ್ಘಾಟನಾ ಆವೃತ್ತಿಯ ಚಾಂಪಿಯನ್​ಶಿಪ್​ ಗೆದ್ದ ನಂತರ ನಾವು ಮಾಡಿದ ವಿಡಿಯೊ ಬಗ್ಗೆ ದೂರು ನೀಡುತ್ತಿರುವ ನಮ್ಮ ಜನರಿಗೆ ಸ್ಪಷ್ಟಪಡಿಸಲು ಬಯಸುತ್ತೇನೆ. ನಾವು ಯಾರ ಭಾವನೆಗಳನ್ನೂ ನೋಯಿಸಲು ಬಯಸಲಿಲ್ಲ. ನಾವು ಪ್ರತಿಯೊಬ್ಬ ವ್ಯಕ್ತಿ ಮತ್ತು ಸಮುದಾಯವನ್ನು ಗೌರವಿಸುತ್ತೇವೆ. ಈ ವೀಡಿಯೊ 15 ದಿನಗಳ ಕಾಲ ಕ್ರಿಕೆಟ್ ಆಡಿದ ನಂತರ ನಮ್ಮ ದೇಹಕ್ಕೆ ಆಗಿರುವ ನೋವನ್ನು ಹೇಳಲು ಬಯಸಿದೆ. ನಾವು ಯಾರನ್ನೂ ಅವಮಾನಿಸಲು ಅಥವಾ ನೋಯಿಸಲು ಪ್ರಯತ್ನಿಸುತ್ತಿಲ್ಲ. ನಾವು ಏನಾದರೂ ತಪ್ಪು ಮಾಡಿದ್ದೇವೆ ಎಂದು ಜನರು ಭಾವಿಸಿದರೆ. ನನ್ನ ಕಡೆಯಿಂದ ನಾನು ಹೇಳಬಹುದಾದುದೆಂದರೆ ಎಲ್ಲರಿಗೂ ಕ್ಷಮಿಸಿ. ಇದನ್ನು ಇಲ್ಲಿಗೆ ನಿಲ್ಲಿಸಿ ಮುಂದೆ ಸಾಗೋಣ ಎಂದು ಹರ್ಭಜನ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!