ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಟಾರ್ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಹಾಗೂ ನತಾಶ ನಡುವೆ ಬಿರುಕು ಮೂಡಿದ್ದು ಈಗಾಗಲೇ ಡಿವೋರ್ಸ್ ಆಗಿದೆ ಎಂದು ಹೇಳಲಾಗಿದೆ.
ನತಾಶಾ ಇನ್ಸ್ಟಾಗ್ರಾಂನಲ್ಲಿ ಪಾಂಡ್ಯ ಹೆಸರನ್ನು ತೆಗೆದುಹಾಕಿದ್ದಾರೆ, ಅಲ್ಲದೇ ಈ ಜೋಡಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಪ್ರತೀ ಐಪಿಎಲ್‌ನಲ್ಲಿಯೂ ಕುಳಿತು ಪಾಂಡ್ಯಗೆ ಸಪೋರ್ಟ್ ಮಾಡುತ್ತಿದ್ದ ನತಾಶಾ ಈ ಬಾರಿ ಎಲ್ಲಿಯೂ ಕಾಣಿಸಿಕೊಂಡಿಲ್ಲ.
ಪಾಂಡ್ಯ ಆಸ್ತಿ ಬಗ್ಗೆಯೂ ಪೋಸ್ಟ್ಗಳು ಹರಿದಾಡುತ್ತಿವೆ. ಹಾರ್ದಿಕ್ ಪಾಂಡ್ಯ ತನ್ನ ಶೇ.70ರಷ್ಟು ಆಸ್ತಿಯನ್ನು ಆಕೆಗೆ ನೀಡಬೇಕಾಗುತ್ತದೆ. ಕೋಟಿಗಟ್ಟಲೆ ಆಸ್ತಿಯ ಒಡೆಯನಾದ ಪಾಂಡ್ಯ ನತಾಶಾನಿಗೆ ಕೊಡಬೇಕಾಗುತ್ತದೆ ಎನ್ನುವ ಅಂಶಗಳು ವೈರಲ್ ಆಗುತ್ತಿವೆ.
ಪಾಂಡ್ಯ ಐಪಿಎಲ್ನಲ್ಲಿ 15 ಕೋಟಿ ಮೊತ್ತವನ್ನು ಪಡೆಯುತ್ತಾರೆ. ಇದಲ್ಲದೆ ವಡೋದರ ಮತ್ತು ಮುಂಬೈನಲ್ಲಿ ಕೋಟಿ ಮೌಲ್ಯದ ಮನೆಯಿದೆ. ಮಾಹಿತಿ ಪ್ರಕಾರ, ಮುಂಬೈನಲ್ಲಿ 30 ಕೋಟಿಗೆ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ವಡೋದರಾದಲ್ಲಿ ಮನೆಯಿದೆಯಂತೆ. ಒಟ್ಟು 91 ಕೋಟಿಯ ಆಸ್ತಿಯ ಒಡೆಯ ಎನ್ನಲಾಗುತ್ತಿದೆ.