ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿದೇಶಿ ವಿದ್ಯಾರ್ಥಿಗಳ ದಾಖಲಾತಿಯನ್ನು ನಿಷೇಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಕ್ಕೆ ಸ್ಥಳೀಯ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಶುಕ್ರವಾರದಂದು ಬೋಸ್ಟನ್ ಫೆಡರಲ್ ನ್ಯಾಯಾಲಯದಲ್ಲಿ ಸಲ್ಲಿಸಲಾದ ದೂರಿನಲ್ಲಿ, ಹಾರ್ವರ್ಡ್ ದಾಖಲಾತಿ ರದುಗೊಳಿಸುವುದು ಅಮೆರಿಕ ಸಂವಿಧಾನ ಮತ್ತು ಇತರ ಫೆಡರಲ್ ಕಾನೂನುಗಳ ಸ್ಪಷ್ಟ ಉಲ್ಲಂಘನೆ ಎಂದು ಕರೆದಿದೆ. ಸರ್ಕಾರದ ಈ ನಿರ್ಧಾರದಿಂದ ವಿಶ್ವವಿದ್ಯಾನಿಲಯ ಮತ್ತು 7,000 ಕ್ಕೂ ಹೆಚ್ಚು ವೀಸಾ ಹೊಂದಿರುವವರ ಮೇಲೆ ವಿನಾಶಕಾರಿ ಪರಿಣಾಮ ಬೀರಿದೆ ಎಂದು ದೂರುದಾರರು ಅರ್ಜಿಯಲ್ಲಿ ತಿಳಿಸಿದ್ದಾರೆ.
ಇದೀಗ ಹಾರ್ವರ್ಡ್ ವಿಶ್ವವಿದ್ಯಾಲಯವು ವಿದೇಶಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಸಾಮರ್ಥ್ಯವನ್ನು ರದ್ದುಗೊಳಿಸುವ ಟ್ರಂಪ್ ಆಡಳಿತದ ಕ್ರಮವನ್ನು ಅಮೆರಿಕದ ನ್ಯಾಯಾಧೀಶರು ಶುಕ್ರವಾರ ತಡೆಹಿಡಿದಿದ್ದಾರೆ.
ಹಾರ್ವರ್ಡ್ ವಿಶ್ವವಿದ್ಯಾನಿಲಯವು ಟ್ರಂಪ್ ಅವರ ಆಡಳಿತದ ಈ ಕ್ರಮವನ್ನು ಖಂಡಿಸಿದೆ. ಸರ್ಕಾರ ನಮಗೆ ಬೆದರಿಕೆ ಹಾಕುತ್ತಿದೆ ಎಂದು ಅದು ಆರೋಪಿಸಿದೆ.