March 25, 2026
Wednesday, March 25, 2026
spot_img

ಯುವ ಪ್ರತಿಭೆಗಳಿಗಾಗಿ ಅಕಾಡೆಮಿ ಆರಂಭಿಸಿದ ಹರಿಯಾಣ ಸ್ಟೀಲರ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

JSW ಸ್ಪೋರ್ಟ್ಸ್ ಬೆಂಬಲಿತ ಹರಿಯಾಣ ಸ್ಟೀಲರ್ಸ್ ಅಕಾಡೆಮಿಯನ್ನು ರೋಹ್ತಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಗಿದೆ. ಭಾರತದ ಮುಂದಿನ ತಲೆಮಾರಿನ ಕಬಡ್ಡಿ ಪ್ರತಿಭಾವಂತರನ್ನು ಬೆಳೆಸಲು ಸಮರ್ಪಿತವಾಗಿರುವ ಈ ಆಧುನಿಕ ಸೌಲಭ್ಯ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ವಾತಾವರಣವನ್ನು ಒದಗಿಸಲು ಸಿದ್ಧವಾಗಿದೆ.

ಅಕಾಡೆಮಿಯಲ್ಲಿ ವಿವಿಧ ಟ್ರಯಲ್‌ಗಳು ಮತ್ತು ಟೂರ್ನಮೆಂಟ್‌ಗಳ ಮೂಲಕ ದೇಶದಾದ್ಯಂತ ಆಯ್ಕೆಗೊಂಡ 17 ರಿಂದ 22 ವರ್ಷದ 30 ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಸೇರಿಸಲಾಗಿದೆ. JSW ಸ್ಪೋರ್ಟ್ಸ್‌ನ ವೃತ್ತಿಪರ ಕಬಡ್ಡಿ ತಂಡ ಹಾಗೂ 2024ರ PKL-11 ಚಾಂಪಿಯನ್‌ ಆಗಿರುವ ಹರಿಯಾಣ ಸ್ಟೀಲರ್ಸ್ ತಂಡದ ಮಾರ್ಗದರ್ಶನದಲ್ಲಿ ಈ ಯುವ ಪ್ರತಿಭೆಗಳು ತರಬೇತಿ ಪಡೆಯಲಿವೆ. ಜೊತೆಗೆ, PKL ಯುವ ಯೋಜನೆಯಲ್ಲಿ ಒಳಗೊಂಡಿರುವ ಆಟಗಾರರೊಂದಿಗೆ, ಕಬಡ್ಡಿಯಲ್ಲಿ ದೀರ್ಘಕಾಲಿಕ ವೃತ್ತಿಜೀವನ ನಿರ್ಮಿಸಲು JSW ಯುವ ಆಟಗಾರರ ಅಭಿವೃದ್ದಿ ಕಾರ್ಯಕ್ರಮವೂ ಸಹಕಾರಿಯಾಗಲಿದೆ.

ಕ್ರೀಡಾಪಟುಗಳಿಗೆ ಟ್ಯೂಷನ್, ವಸತಿ, ಪೌಷ್ಟಿಕ ಆಹಾರ ಹಾಗೂ ಉನ್ನತ ಮಟ್ಟದ ಕ್ರೀಡಾ ತರಬೇತಿಯನ್ನು ಒಳಗೊಂಡ ಪೂರ್ಣ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಇದೇ ವೇಳೆ, ಹರಿಯಾಣ ಸ್ಟೀಲರ್ಸ್ ತಂಡದ ಹೆಸರಿನಲ್ಲಿ ವರ್ಷಪೂರ್ತಿ ನಡೆಯುವ ಹಳ್ಳಿಮಟ್ಟದ ಟೂರ್ನಮೆಂಟ್‌ಗಳಲ್ಲಿ ಸ್ಪರ್ಧಾತ್ಮಕ ಅನುಭವ ಪಡೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !