ದರ್ಶನ್​ಗೆ ಆಪರೇಷನ್ ಆಯ್ತಾ?: ಜಡ್ಜ್​ ಕೇಳಿದ ಪ್ರಶ್ನೆಗೆ ದಾಸನ ಪರ ವಕೀಲರು ಕೊಟ್ಟ ಉತ್ತರ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಆರೋಪಿಯಾಗಿರುವ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್​ನ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಪೀಠದಲ್ಲಿ ನಡೆಯುತ್ತಿದೆ. ಸದ್ಯ ನಟ ದರ್ಶನ್​ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಜಾಮೀನಿಗಾಗಿ ದರ್ಶನ್ ಪರ ವಕೀಲರು ಕೋರ್ಟ್​ನಲ್ಲಿ ವಾದ ಮಾಡಿದರು.

ಇದೇ ವೇಳೆ ದರ್ಶನ್​ಗೆ ಆಪರೇಷನ್ ಆಯ್ತಾ ಎಂದು ನ್ಯಾಯಾಧೀಶರು ದರ್ಶನ್​​ ಪರ ವಕೀಲರನ್ನ ಪ್ರಶ್ನೆ ಮಾಡಿದ್ದಾರೆ.

ನಟ ದರ್ಶನ್ ಪರವಾಗಿ ಸಿವಿ ನಾಗೇಶ್ ಅವರು 1 ಗಂಟೆಗಳ ಕಾಲ ವಾದ ಮಂಡಿಸಿದ್ರು. ಪೊಲೀಸರು ಕೊಟ್ಟ ಸಾಕ್ಷಿಗಳು ಸರಿಯಿಲ್ಲ. ಕೆಲವೆಡೆ ಹೇಳಿಕೆ ತಿರುಚಲಾಗಿದೆ ಎಂದು ವಾದ ಮಂಡಿಸಿದರು. ದರ್ಶನ್​ಗೆ ಜಾಮೀನು ನೀಡುವಂತೆ ಕೋರ್ಟ್ ಬಳಿ ಮನವಿ ಮಾಡಿ ಹಿರಿಯ ವಕೀಲರಾದ ಸಿವಿ ನಾಗೇಶ್ ವಾದ ಮುಕ್ತಾಯ ಮಾಡಿದರು.

ಸಿವಿ ನಾಗೇಶ್ ವಾದ ಮುಗಿಸಿದ ಬಳಿಕ ನ್ಯಾಯಾಧೀಶರು ನಟ ದರ್ಶನ್ ಚಿಕಿತ್ಸೆ ಬಗ್ಗೆ ಪ್ರಶ್ನೆ ಮಾಡಿದ್ದು . ಮಧ್ಯಂತರ ಜಾಮೀನು ಕಥೆ ಏನಾಯ್ತು? ಅಪರೇಷನ್ ಆಯ್ತು? ಎಂದು ವಕೀಲರನ್ನು ಜಡ್ಜ್ ಪ್ರಶ್ನೆ ಮಾಡಿದ್ರು. ಇದಕ್ಕೆ ಉತ್ತರಿಸಿದ ವಕೀಲ ಸಿವಿ ನಾಗೇಶ್, ದರ್ಶನ್​ಗೆ ವೈದ್ಯರು ಟ್ರೀಟ್ಮೆಂಟ್ ಕೊಡ್ತಾ ಇದ್ದಾರೆ. ಶಸ್ತ್ರಚಿಕಿತ್ಸೆ ಅಗತ್ಯವಿದೆ ಅಂತ ಹೇಳಿದ್ದಾರೆ ಎಂದರು.

ಯಾವಾಗ ಆಪರೇಷನ್​ ಅನ್ನೋದು ವರದಿಯಲ್ಲಿ ಇಲ್ಲ ಎಂದು ಜಡ್ಜ್​ ಮತ್ತೆ ಪ್ರಶ್ನೆ ಮಾಡಿದ್ರು. ಬಿ ಪಿ ವೇರಿಯೇಷನ್ ಇದೆ, ನಾರ್ಮಲ್ ಬಂದ ಬಳಿಕ ವೈದ್ಯರು ಅಪರೇಷನ್ ಮಾಡಲಿದ್ದಾರೆ ಎಂದು ಹಿರಿಯ ವಕೀಲ ನಾಗೇಶ್ ಕೋರ್ಟ್​ಗೆ ತಿಳಿಸಿದ್ದಾರೆ.

ವಿಚಾರಣೆ ಆರಂಭವಾಗ್ತಿದ್ದಂತೆ ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಅವರು ರೇಣುಕಾಸ್ವಾಮಿ ಕೇಸ್​ನ ಹೈ-ವಿಟ್ನೆಸ್​ಗಳ ಸ್ವಇಚ್ಚಾ ಹೇಳಿಕೆಗಳನ್ನು ಓದಿದರು. ಇಬ್ಬರು ಸಾಕ್ಷಿಗಳ ಹೇಳಿಕೆ ನೋಡಿದ್ರೆ ಅವರು ಘಟನಾ ಸ್ಥಳದಲ್ಲೇ ಇರಲಿಲ್ಲ ಎನ್ನುವ ಅನುಮಾನ ಮೂಡಿದೆ ಎಂದಿದ್ದಾರೆ.

ಕಾರು ಬಂತು-ಹೋಯ್ತು ಎನ್ನುವ ರೀತಿ ಇದೆ. ಯಾವಾಗ, ಯಾರು ಬಂದರು? ಯಾರು ಇದ್ದರೂ ಅಂತ ಹೇಳಿಲ್ಲ. ಸಾಕ್ಷಿಯಾಗಿರುವ ಮಲ್ಲಿಕಾರ್ಜುನ ಅವರು ಮಂಗಳವಾರ ಕೆಲಸಕ್ಕೆ ಬಂದಾಗ ರೇಣುಕಾಸ್ವಾಮಿ ಕೊಲೆ ಆಗಿರೋದರ ಬಗ್ಗೆ ಗೊತ್ತಾಗಿದೆ ಅಂತಾರೆ. ಯಾರು ಕೊಲೆ ಮಾಡಿದ್ರು ಅನ್ನೋದು ಮಾಧ್ಯಮಗಳ ಮೂಲಕ ಗೊತ್ತಾಯಿತು ಅಂದಿದ್ದಾರೆ. ಸಾಕ್ಷಿಗಳು ಸರಿಯಾಗಿಲ್ಲ ಎಂದು ಸಿವಿ ನಾಗೇಶ್ ವಾರ ಮಂಡಿಸಿದೆ.

ಪುನೀತ್ ಹೇಳಿಕೆಯಲ್ಲಿ ನಾನು ಅಲ್ಲಿದ್ದೆ, ಇಲ್ಲಿದ್ದೆ, ತಿರುಪತಿ ಹೋಗಿದ್ದೇ ಫುತ್ ಪಾತ್ ಮೇಲೆ ಮಲಗಿದ್ದೆ ಎಂದಿದ್ದಾನೆ. ತಮಿಳುನಾಡಿಗೆ ಹೋಗಿದ್ದೆ, ಅದು-ಇದು ಅಂತ ಹೇಳಿದ್ದಾನೆ. ಬಳಿಕ ಜೂನ್ 19 ರಂದು ನಾನು‌ ಬೆಂಗಳೂರಿಗೆ ವಾಪಸ್ ಬಂದೆ ಅಂದಿದ್ದಾನೆ. ಯಾಕೆ ಸುತ್ತಾಡ್ತಾ ಇದ್ದೆ ಅಂದ್ರೆ ಹೆದರಿಕೆ ಹಾಕ್ತಾ ಇತ್ತು ಅಂತಾರೆ. ಸಾಕ್ಷಿಗೆ ಯಾಕೆ ಹೆದರಿಕೆ ಆಗುತ್ತೆ? ಇದೆಲ್ಲ ನಂಬೋ ತರ ಇದೆಯಾ? ಎಂದು ಸಿವಿ ನಾಗೇಶ್ ವಾದ ಮಂಡಿಸಿದರು.

ಪುನೀತ್ ಗೋವಾಗೆ ಹೋಗಲು ಟಿಕೆಟ್ ಬುಕ್ ಆಗಿರೋದು ಜೂನ್ 21, ಆದರೆ ರೇಣುಕಾಸ್ವಾಮಿ ಕೊಲೆ ಆಗಿರೋದು ಜೂನ್ 8, ಆದರೆ ಪುನೀತ್ ಗೋವಾಗೆ ಹೋಗಿದ್ದು ಜೂನ್ 11 ರಂದು, ಆತ ಹೆದರಿಕೊಂಡು ಗೋವಾಗೆ ಹೋಗಿಲ್ಲ. ಗೋವಾಗೆ ಹೇಗೋ ಫ್ಲಾನ್ ಮೊದಲೇ ಇತ್ತು ಎಂದು ನಾಗೇಶ್ ವಾದ ಮಾಡಿದರು. ಬಳಿಕ ಪುನೀತ್ ಮೊಬೈಲ್ ನಲ್ಲಿ ರಿಟ್ರೀವ್ ಆದ ಪೋಟೋ ವನ್ನು ಜಡ್ಜ್ ಗೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!