March 5, 2026
Thursday, March 5, 2026
spot_img

ಭಾರತ-ರಷ್ಯಾ ತೈಲ ಬಾಂಧವ್ಯಕ್ಕೆ ಬ್ರೇಕ್ ಬಿತ್ತೇ? ಟ್ರಂಪ್ ಗೆ ಮಾಸ್ಕೋ ನೀಡಿದ ತಿರುಗುಬಾಣವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ನೀಡಿದ ಸ್ಫೋಟಕ ಹೇಳಿಕೆಯ ಬೆನ್ನಲ್ಲೇ ರಷ್ಯಾ ತನ್ನ ಮೌನ ಮುರಿದಿದೆ. ರಷ್ಯಾದಿಂದ ತೈಲ ಖರೀದಿಯನ್ನು ಭಾರತ ನಿಲ್ಲಿಸಲಿದೆ ಎಂಬ ಟ್ರಂಪ್ ಮಾತಿಗೆ ರಷ್ಯಾ “ನಮಗೆ ದೆಹಲಿಯಿಂದ ಇಂತಹ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ” ಎಂದು ಪ್ರತಿಕ್ರಿಯಿಸಿದೆ.

ಭಾರತವು ರಷ್ಯಾದ ತೈಲವನ್ನು ಕೈಬಿಟ್ಟು, ಅಮೆರಿಕ ಮತ್ತು ವೆನೆಜುವೆಲಾದಿಂದ ಇಂಧನ ಖರೀದಿಸಲು ಒಪ್ಪಿಕೊಂಡಿದೆ ಎಂದು ಟ್ರಂಪ್ ಹೇಳಿದ್ದರು.

ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಮಾತನಾಡಿ, “ತೈಲ ವ್ಯಾಪಾರ ನಿಲ್ಲಿಸುವ ಕುರಿತು ಭಾರತದಿಂದ ನಮಗೆ ಯಾವುದೇ ಸೂಚನೆ ಬಂದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:

ಭಾರತದೊಂದಿಗಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ರಷ್ಯಾ ಮುಂದುವರಿಸಲಿದೆ ಮತ್ತು ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಪೆಸ್ಕೋವ್ ತಿಳಿಸಿದ್ದಾರೆ.

ಇದೇ ವೇಳೆ ಟ್ರಂಪ್ ಭಾರತದೊಂದಿಗಿನ ವ್ಯಾಪಾರ ತೆರಿಗೆಯನ್ನು ಶೇ. 25 ರಿಂದ ಶೇ. 18 ಕ್ಕೆ ಇಳಿಸಿದ್ದು, 500 ಶತಕೋಟಿ ಡಾಲರ್ ವ್ಯಾಪಾರ ಒಪ್ಪಂದ ಘೋಷಿಸಿರುವುದು ಗಮನಾರ್ಹ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !