ಹೊಸದಿಗಂತ ವರದಿ, ಹಾಸನ:
ನಗರದ ಆದಿದೇವತೆ ಹಾಸನಾಂಬ ದೇವಿಯ ಉತ್ಸವದ ಅಂಗವಾಗಿ ಯುವಕ ಯುವತಿಯರನ್ನು ಸಾಹಸ ಕ್ರೀಡೆಗಳತ್ತ ಆಕರ್ಷಿಸಲು ಜಿಲ್ಲಾಡಳಿತ ಯುವ ಸಬಲೀಕರಣ, ಮತ್ತು ಕ್ರೀಡಾ ಇಲಾಖೆ, ಮತ್ತು ಪ್ರವಸೋದ್ಯಮ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳಗ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಿ ಸತ್ಯಭಾಮ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಹಾಸನಾಂಬ ಉತ್ಸವದ ಆಯೋಜನೆ ಕುರಿತು ಮಾತನಾಡಿದ ಅವರು, ಹಾಸನ ಜಿಲ್ಲೆ ಪ್ರವಾಸಿ ಸ್ಥಳಗಳ ತವರೂರಾಗಿದ್ದು, ಈ ನಿಟ್ಟಿನಲ್ಲಿ ಹಾಸನಾಂಬೆ ಉತ್ಸವವನ್ನು ಕಣ್ಣುತುಂಬಿಕೊಳ್ಳಲು ಸಹಸ್ರಾರು ಮಂದಿ ಆಗಮಿಸಲಿದ್ದಾರೆ. ಬರುವ ಭಕ್ತಾದಿಗಳನ್ನು, ಯುವಕ, ಸುವತಿಯರನ್ನು, ಸಾಹಸ ಕ್ರೀಡೆಗಳತ್ತ ಆಕರ್ಷಿಸಲು, ಯುವ ಸಮುದಾಯ ಈ ಸಾಹಸ ಕ್ರೀಡೆಗಳ ಮೂಲಕ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಯುವ ಸಬಲೀಕರಣ, ಮತ್ತು ಕ್ರೀಡಾ ಇಲಾಖೆ, ಮತ್ತು ಪ್ರವಸೋದ್ಯಮ ಇಲಾಖೆ ಪ್ಯಾರಾಸೈಲಿಂಗ್, ಮತ್ತು, ಪ್ಯಾರಾಮೋಟರಿಂಗ್ ವಾಯು ಸಾಹಸ ಕ್ರೀಡೆಗಳು, ಆಗಸದಿಂದ ಹಾಸನ- ಹಾಸನ ಬೈಸ್ಕೈ, ಜಿಲ್ಲೆಯ ಪ್ರವಾಸಿತಾಣಗಳನ್ನು ವೀಕ್ಷಿಸಲು ಟೂರ್ ಪ್ಯಾಕೆಜ್ ಅನ್ನು ಆಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ ಮಾತನಾಡಿ ಈ ಬಾರಿ ಹಾಸನಂಬ ಜಾತ್ರಾ ಮಹೋತ್ಸವದಲ್ಲಿ ಹಾಸನಾಂಬ ವೈಭವ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಿಕೊಂಡಿದ್ದು, ಇದರಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಇದೆ ಮೊದಲ ಬಾರಿಗೆ( ಬೈ-ಸ್ಕೈ ಹೆಲಿಟೊರಿಸಂ)ಆಗಸದಲ್ಲಿ ಹಾಸನ ಎಂಬ ವಿನೂತನವಾಗಿ ಹೆಲಿಕ್ಯಾಪ್ಟರ್ ಮೂಲಕ ನಗರವನ್ನ ಸುತ್ತು ಹಾಕುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಪ್ರವಾಸಿ ತಾಣಗಳ ತೋರಿಸುವ ನಿಟ್ಟಿನಲ್ಲಿ ನಾಲ್ಕು ಪ್ಯಾಕೇಜ್ ಗಳ ಮೂಲಕ ಜಿಲ್ಲೆಯ ಪ್ರಮುಖ ಸ್ಥಳಗಳನ್ನು ತೋರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ಯಾರಾಸೈಲಿಂಗ್ ಮತ್ತು ಪ್ಯಾರಾಮೋಟರಿಂಗ್ ವಾಯು ಕ್ರೀಡೆಗಳು
ಈ ಕ್ರೀಡೆಗಳು ನ. ೨ ರಿಂದ ನ. ೧೫ ರವರೆಗೆ ನಡೆಯಲಿದೆ. ಹಾಸನ ನಗರದ ಹೊರವಲಯದ ಬೂವನಹಳ್ಳಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದಲ್ಲಿ ನಡೆಯಲಿದೆ. ಬೆಂಗಳೂರಿನ ಆಯೋಜನೆ ಮಾಡಲಿದೆ. ಪ್ರತಿ ವ್ಯಕ್ತಿಗೆ ಪ್ಯಾರಸೈಲಿಂಗ್ ೫೦೦ ರೂ, ಪ್ಯಾರಾಮೋಟರಿಂಗ್ ೨೦೦೦ ರೂ ನಿಗದಿಪಡಿಸಲಾಗಿದೆ. ೪ ರಿಂದ ೫ ನಿಮಿಷ ಹಾರಿಸಲಾಗುತ್ತದೆ.
ಆಗಸದಿಂದ ಹಾಸನ- ಹಾಸನ ಬೈ ಸ್ಕೈ
ಈ ಕಾರ್ಯಕ್ರಮವು ನ.೩ ರಿಂದ ನ.೬ ರವರೆಗೆ ಆಯೋಜಿಸಲಾಗಿದೆ. ಸರ್ಕಾರಿ ಕಲಾ ಕಾಲೇಜಿನ ಮೈದಾನದಲ್ಲಿ ಬೆಳಿಗ್ಗೆ ೯ ರಿಂದ ಸಂಜೆ ೫;೩೦ ವರೆಗೆ ನಡೆಯಲಿದೆ. ಪ್ರತಿವ್ಯಕ್ತಿಗೆ ೪೩೦೦ ಶುಲ್ಕವಿದ್ದು, ಎರಡು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಶುಲ್ಕವಿಲ್ಲ. ೬ ರಿಂದ ೭ ನಿಮಿಷ ಹಾರಿಸಲಾದಗುತ್ತದೆ. ಈ ಸಮಯದಲ್ಲಿ ಶ್ರೀ ಮಳೆಮಲ್ಲೇಶ್ವರ ದೇವಸ್ಥಾನ, ಶ್ರೀ ಹಾಸನಾಂಬ ದೇವಾಲಯ, ಗೆಂಡರಕಟ್ಟೆ ಅರಣ್ಯ ಪ್ರದೇಶ, ಸೀಗೆಗುಡ್ಡ, ದೇವಿಗೆರೆಕೊಳವನ್ನು ತೋರಿಸಲಾಗುತ್ತದೆ.
ಪ್ರವಾಸಿ ತಾಣಗಳ ಟೂರ್ ಪ್ಯಾಕೆಜ್
ಹಾಸನ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳನ್ನು ಹಾಸನಾಂಬ ದರ್ಶನಕ್ಕೆ ಬರುವ ಭಕ್ತಾದೊಗಳಿಗೆ ವೀಕ್ಷಣೆ ಮಾಡಲು ಟೂರ್ ಪ್ಯಾಕೆಜ್ ಆಯೋಜನೆ ಮಾಡಲಾಗಿದ್ದು, ಇದು ನ. ೩ ರಿಂದ ನ ೧೪ ವರೆಗೆ ಇರಲಿದೆ. ಸಕಲೇಶಪುರ, ಬೇಲೂರು, ಅರಸೀಕೆರೆ, ಶ್ರವಣಬೆಳಗೋಳ ಇಲ್ಲಿರುವ ಸ್ಥಳಗಳನ್ನು ವೀಕ್ಷಣೆ ಮಾಡಲು ಬಸ್ ವ್ಯವಸ್ಥೆ ಮಾಡಲಾಗಿದೆ. ಆದರೆ ಇಲ್ಲಿ ಶಕ್ತಿ ಯೋಜನೆ ಲಭ್ಯವಿರುವುದಿಲ್ಲ, ನಿಗದಿ ಮಾಡಿರುವ ಹಣವನ್ನು ಪಾವತಿಸಿ ತೆರಳಬೇಕು ಮತ್ತು ಉಚಿತ ಊಟದ ವ್ಯವಸ್ಥೆ(ಸಕಲೇಶಪುರು ಹೊರತುಪಡಿಸಿ ಇತರೆಡೆ ಉಚಿತ ಊಟದ ವ್ಯವಸ್ಥೆ), ಪ್ರವಾಸಿ ಮಾರ್ಗದರ್ಶಿಯನ್ನು ನೀಡಲಾಗುತ್ತದೆ.