ಹೊಸದಿಗಂತ ಡಿಜಿಟಲ್ ಡೆಸ್ಕ್:
ವರುಷಕ್ಕೊಮ್ಮೆ ದರುಶನ ನೀಡೋ ತಾಯಿ, ಹಾಸನದ ಅಧಿದೇವತೆಯ ಜಾತ್ರೋತ್ಸವ ಯಾಚುದೇ ಅಡೆತಡೆಯಿಲ್ಲದೆ ಅದ್ದೂರಿಯಾಗಿ ನಡೆಯುತ್ತಿದೆ. ದೇವಾಲಯದ ಬಾಗುಲಿ ತೆರೆದು ಏಳನೇ ದಿನವೂ ಕೂಡ ಅಮ್ಮನ ದರುಶನಕ್ಕಾಗಿ ಭಕ್ತರ ದಂಡು ಹರಿದುಬರುತ್ತಿದೆ. ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ಬಂದು ಭಕ್ತರು ಹಾಸನಾಂಬೆಯ ದರುಶನ ಪಡೆಯುತ್ತಿದ್ದಾರೆ.
ಜನಸಾಮಾನ್ಯರ ಜೊತೆಗೆ ರಾಜಕೀಯ ಗಣ್ಯರೂ ಇಂದು ದೇವಿಯ ದರುಶನ ಪಡೆಯಲಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಮ್ಮನವರ ಸನ್ನಿಧಿಗೆ ಬರಲಿದ್ದಾರೆ. ಈ ತಿಂಗಳ 15ರವರೆಗೆ ದೇವಸ್ಥಾನದ ಬಾಗಿಲು ತೆರೆದಿರಲಿದ್ದು, ಅಲ್ಲಿವರೆಗೆ ಭಕ್ತರಿಗೆ ದರುಶನ ಭಾಗ್ಯ ಸಿಗಲಿದೆ. ಯಾವುದೇ ಅನಾಹುತ ನಡೆಯದಂತೆ ಜಿಲ್ಲಾಡಳಿತ ಭದ್ರತೆ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಸಹ ಒದಗಿಸಿದೆ.