ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಯೋತ್ಪಾದನಾ ವಿರೋಧಿ ಹೋರಾಟ ಸಮಿತಿಯಿಂದ ನಡೆಬೇಕಾಗಿರುವ ಸಭೆಗೆ ತೆರಳುತ್ತಿದ್ದ ಬಜರಂಗದಳದ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತ್ತಡ್ಕ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ವಿಶ್ವ ಹಿಂದು ಪರಿಷತ್ ಪುತ್ತೂರು ಜಿಲ್ಲೆ ಉಗ್ರವಾಗಿ ಖಂಡಿಸಿದೆ.
ಇದು ಸರಕಾರ ನಡೆಸಿದ ಹೇಯ ಕೃತ್ಯವಾಗಿದೆ. ಭಯೋತ್ಪಾದನೆಯ ವಿರುದ್ಧ ನಡೆಯುತ್ತಾ ಇದ್ದಂತಹ ಈ ಸಭೆಯನ್ನು ಹತ್ತಿಕ್ಕಲು ನೋಡುತ್ತಿರುವಂತ ಈ ಸರಕಾರ ಭಯೋತ್ಪಾದಕರ ಪರವಾಗಿ ಇರುವಂತೆ ತೋರುತ್ತಿದೆ.
ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳಿರುವಂತಹ ವ್ಯಕ್ತಿಗಳನ್ನ ರಕ್ಷಣೆ ಮಾಡುವಂಥದ್ದು, ರಾಮೇಶ್ವರಂ ಹೋಟೆಲ್ ಎದುರುಗಡೆ ಬಾಂಬ್ ದಾಳಿಯನ್ನು ನಡೆಸಿರುವಂತಹ ವ್ಯಕ್ತಿಗಳನ್ನ ರಕ್ಷಣೆ ಮಾಡುವಂತಹ ಈ ಸರಕಾರ ಇದನ್ನು ವಿರೋಧಿಸುವಂಥ ದೇಶಭಕ್ತರನ್ನ ಬಂಧಿಸಿರುವಂಥದ್ದು ಖಂಡನೀಯ ಎಂದು ವಿಹಿಂಪ ತಿಳಿಸಿದೆ.