ಹೊಸದಿಗಂತ ಹಾಸನ :
ಸಾಲಭಾದೆ ತಾಳಲಾರದೆ ಯುವ ರೈತ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಲೂರು ತಾಲ್ಲೂಕಿನ, ಮಂದಿರ ಗ್ರಾಮದ ಬಳಿ ನಡೆದಿದೆ.
ನಿರಂಜನ್.ಡಿ. (28) ನದಿಗೆ ಹಾರಿ ಆತ್ಮಹತ್ಯೆ ಶರಣಾದ ವ್ಯಕ್ತಿ. ಮೃತ ನಿರಂಜನ್ ಕೃಷಿ ಹಾಗೂ ವಿವಿಧ ಬೆಳೆ ಬೆಳೆಯಲು ಬ್ಯಾಂಕ್, ಫೈನಾನ್ಸ್, ಸ್ನೇಹಿತರ ಬಳಿ ಲಕ್ಷಾಂತರ ರೂ ಸಾಲ ಸೇರಿದಂತೆ ಕೃಷಿಗಾಗಿ ಚಿನ್ನಾಭರಣಗಳನ್ನು ಸಹ ಅಡವಿಟ್ಟು ಸಾಲ ಮಾಡಿದ್ದರು. ಬೆಳೆ ಕೈಕೊಟ್ಟು ಬಾರಿ ನಷ್ಟ ಅನುಭವಿಸಿದ್ದ ನಿರಂಜನ್ ಮೇ.೪ ರಂದು ರಾತ್ರಿ ಕುಂದೂರು ಗ್ರಾಮದ ಮನೆಯಿಂದ ಬೈಕ್‌ನಲ್ಲಿ ತೆರಳಿದ್ದರು. ಮಾರನೇ ದಿನ ಶೆಟ್ಟಿಹಳ್ಳಿ ಸೇತುವೆ ಬಳಿ ಬೈಕ್ ಪತ್ತೆಯಾಗಿತ್ತು.
ನಂತರ ನಿರಂಜನ್ ಕುಟುಂಬಸ್ಥರು ಪೊಲೀಸರಿಗೆ ನಿರಂಜನ್ ಕಾಣೆಯಾಗಿದ್ದಾನೆ ಎಂದು ದೂರು ನೀಡಿದ್ದರು. ನಿರಂಜನ್‌ಗಾಗಿ ಹುಡುಕಾಟ ನಡೆಸಿದ್ದ ವೇಳೆ ಮಂದಿರ ಗ್ರಾಮದ ಹೇಮಾವತಿ ನದಿಯಲ್ಲಿ ನಿರಂಜನ್ ಶವ ತೇಲುತ್ತಿದ್ದ ಸ್ಥಿತಿಯನ್ನು ಪತ್ತೆಯಾಗಿದೆ. ಸ್ಥಳೀಯರು ಹಾಗೂ ಪೊಲೀಸರು ಶವವನ್ನು ಹೊರಕ್ಕೆ ತೆಗೆದಿದ್ದಾರೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೋಲಿಸರು ಪರಿಶೀಲನೆ ನಡೆಸುತ್ತಿದ್ದಾರೆ.