ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನಾಂಬೆ ದೇವಿ ಜಾತ್ರಾ ಉತ್ಸವ ಪೂರ್ಣಗೊಂಡಿದ್ದು, ಈ ಬಾರಿ ಹಲವು ಕೋಟಿ ರುಪಾಯಿ ಆದಾಯ ಸಂಗ್ರಹವಾಗಿದೆ. ಹಾಸನಾಂಬೆ ದರ್ಶನೋತ್ಸವವು ವರ್ಷಕ್ಕೆ ಒಮ್ಮೆ ಮಾತ್ರ ನಡೆಯುತ್ತದೆ. ಈ ಬಾರಿ ಹಾಸನಾಂಬೆ ದರ್ಶನ ಪಡೆಯಲು ಭಕ್ತಾಧಿಗಳು ಸಾಕಷ್ಟು ಸವಾಲು ಎದುರಿಸಿದ್ದರು. ಸರತಿ ಸಾಲಿನಲ್ಲಿ ಗಂಟೆ ಗಟ್ಟಲೆ ನಿಂತು ಪರದಾಡಿದ್ದರು. ಇದರ ಹೊರತಾಗಿಯೂ ಈ ಬಾರಿ ಕೋಟ್ಯಾಂತರ ರೂಪಾಯಿ ಆದಾಯ ಸಂಗ್ರಹವಾಗಿದೆ.
ಹಾಸನಾಂಬ ದರ್ಶನೋತ್ಸವದ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ಗುಸ ಈ ಬಾರಿಯ ಹಾಸನಾಂಬೆ ದರ್ಶನೋತ್ಸವದಿಂದ ಬರೋಬ್ಬರಿ 12.64 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಹಾಸನಾಂಬ ದೇವಾಲಯದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಮೊತ್ತದ ದಾಖಲೆಯ ಆದಾಯ ಇದು ಎಂದು ಹೇಳಲಾಗುತ್ತಿದೆ.
ಹಾಸನಾಂಬ ದೇವಸ್ಥಾನ ಸಮಿತಿಯ ಆಡಳಿತಾಧಿಕಾರಿ ಮಾರುತಿ ಅವರು ಮಾತನಾಡಿ, 1000 ಟಿಕೆಟ್ ಮಾರಾಟದಿಂದ 7.41 ಕೋಟಿ ರೂ., 300 ಟಿಕೆಟ್ ಮಾರಾಟದಿಂದ 1.81. ಕೋಟಿ ರೂ., ಲಡ್ಡು ಪ್ರಸಾದ ಮಾರಾಟದಿಂದ 76.77 ಲಕ್ಷ ರೂ., ಆನ್‌ಲೈನ್ ಟಿಕೆಟ್ ಮಾರಾಟ ಮೂಲಕ 6.84 ಲಕ್ಷ ರೂ, ಸೀರೆ ಮಾರಾಟದಿಂದ 2 ಲಕ್ಷ ರೂ. ಆದಾಯ ಬಂದಿದ್ದು, ದೇವಾಲಯದ ಹುಂಡಿಗೆ 2,55,97,567 ರೂ. ಸಿದ್ದೇಶ್ವರ ದೇಗುಲದ ಹುಂಡಿಯಲ್ಲಿ 13,47,780 ರೂ ಬಂದಿದ್ದು, ಉಳಿದ ಹಣ ಕಾಣಿಕೆ, ತುಲಾಭಾರ, ಜಾಹೀರಾತಿನ ಮೂಲಕ ಸಂಗ್ರಹವಾಗಿದೆ ಎಂದು ಹೇಳಿದ್ದಾರೆ.