ಹೊಸದಿಗಂತ ವರದಿ,ಶಿವಮೊಗ್ಗ;
ಹರಿಯಾಣ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಸೊರಬದ ಆನವಟ್ಟಿ ಬಸ್ ಸ್ಟ್ಯಾಂಡ್ ಸರ್ಕಲ್‌ನಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಮತ್ತು ಸೊರಬ ಮಂಡಲ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ಅವರ ಮಾರ್ಗದರ್ಶನದಲ್ಲಿ ಪಟಾಕಿ ಸಿಡಿಸುವ ಮೂಲಕ ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆ ನಡೆಯಿತು. ಈ ಗೆಲುವು ಕೇವಲ ಪಕ್ಷದ ಯಶಸ್ಸಷ್ಟೇ ಅಲ್ಲ, ಹಳ್ಳಿಗಳ ಮಟ್ಟದಿಂದಲೂ ಬಲವಾಗಿರುವ ಭಾರತೀಯ ಜನತಾ ಪಾರ್ಟಿಯ ದೃಢ ಇಚ್ಛಾಶಕ್ತಿಗೆ ಸಾಕ್ಷಿಯಾಗಿದೆ ಎಂದು ಸಂಭ್ರಮಿಸಿದರು.
ಜಿಲ್ಲಾ ಉಪಾಧ್ಯಕ್ಷರಾದ ಪದ್ಮಿನಿ ರಾವ್, ಗೀತಾ ಮಲ್ಲಿಕಾರ್ಜುನ್ , ಪ್ರಧಾನ ಕಾರ್ಯದರ್ಶಿಗಳಾದ ಶಿವರಾಜ್, ಎಂ. ಬಿ.ಹರಿಕೃಷ್ಣ, ಮಾಲತೇಶ್ ಸಿ.ಎಚ್, ಜಿಲ್ಲಾ ಕಾರ್ಯದರ್ಶಿ ವಿನ್ಸೆಂಟ್ ರೋಡ್ರಿಗಸ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸಿದ್ದಲಿಂಗಪ್ಪ ಎಂ , ಪ್ರಮುಖರಾದ ಕೊಟ್ರೇಶ್ , ರಾಜು ಬಡಿಗೇರ್ , ಜಿಲ್ಲಾ ಸಾಮಾಜಿಕ ಮಾಧ್ಯಮ ಸಂಚಾಲಕರಾದ ದಿನೇಶ್, ಗಣೇಶ್, ಕಿರಣ ಬಿ.ಇ, ಸುರಜ್, ಪದಾಕಾರಿಗಳು ಉಪಸ್ಥಿತರಿದ್ದರು.