ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶ ರೇವಾದಲ್ಲಿ ನಡೆದ 58 ವರ್ಷದ ಮಹಿಳೆಯ ಕೊಲೆ ಮತ್ತು ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು 16 ವರ್ಷದ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದಾರೆ.
ಇದೀಗ ಕೊಲೆಗೆ ಕಾರಣ ಬಹಿರಂಗವಾಗಿದೆ. ಎರಡು ವರ್ಷಗಳ ಹಿಂದಿನ ಕಳ್ಳತನ ಆರೋಪಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಮಹಿಳೆಯನ್ನು ಕೊಂದಿರುವುದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ.
ಜನವರಿ 31ರ ರಾತ್ರಿ ಕೈಲಾಸಪುರದಲ್ಲಿ 16 ವರ್ಷದ ಆರೋಪಿ ರಾತ್ರಿ ಮನೆಗೆ ನುಗ್ಗಿ ಒಂಟಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ. ಆರೋಪಿ ಮಹಿಳೆಯ ಕೈಕಾಲುಗಳನ್ನು ಕಟ್ಟಿ, ಬಾಯಿಗೆ ಸಾಕ್ಸ್ ಮತ್ತು ಎಲೆಗಳನ್ನು ತುಂಬಿ. ನಂತರ ಹಲವೆಡೆ ಕುಡುಗೋಲಿನಿಂದ ಹಲ್ಲೆ ನಡೆಸಿ ಹತ್ಯೆಗೈದ್ದು ಮೃತದೇಹದ ಮೇಲೆ ಅತ್ಯಾಚಾರವೆಸಗಿದ್ದಾನೆ.ಇದಾದ ಬಳಿಕ ಆರೋಪಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದನು.
58 ವರ್ಷದ ಸುಕ್ಬರಿಯಾ ದೇವಿ ಗುಪ್ತಾ ಅವರ ಮೃತದೇಹವು ಅವರ ಸ್ವಂತ ಮನೆಯ ನಿರ್ಮಾಣ ಹಂತದ ಭಾಗದಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಕೈಕಾಲು ಕಟ್ಟಲಾಗಿತ್ತು. ಬಾಯಿಯಲ್ಲಿ ಕರವಸ್ತ್ರ, ಸ್ಟಾಕಿಂಗ್ಸ್ ಮತ್ತು ಎಲೆಗಳು ಇದ್ದವು. ಬಳಿಕ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಎಎಸ್ಪಿ ಪ್ರಕಾರ, ಮಹಿಳೆಯ ಮಗ ಗ್ರಾಮದ ಅಪ್ರಾಪ್ತ ವಯಸ್ಕನ ಮೇಲೆ ಅನುಮಾನ ವ್ಯಕ್ತಪಡಿಸಿದನು. ಈ ಅಪ್ರಾಪ್ತ ವಯಸ್ಕ ಎರಡು ವರ್ಷಗಳ ಹಿಂದೆ ನಮ್ಮ ಮನೆಗೆ ಟಿವಿ ನೋಡಲು ಬಂದಿದ್ದನು. ಇದೇ ವೇಳೆ ಮನೆಯಲ್ಲಿದ್ದ ಮೊಬೈಲ್ ಕಳ್ಳತನವಾಗಿತ್ತು.ಇದಕ್ಕೆ ಅಪ್ರಾಪ್ತ ಬಾಲಕನ ಮೇಲೆ ಕುಟುಂಬಸ್ಥರು ಆರೋಪ ಮಾಡಿದ್ದರು. ಅಂದಿನಿಂದ ಆರೋಪಿ ನಮ್ಮ ಕುಟುಂಬದ ಮೇಲೆ ದ್ವೇಷ ಇಟ್ಟುಕೊಂಡಿದ್ದಾನೆ. ಪೊಲೀಸರಿಗೆ ಸುಳಿವು ಸಿಕ್ಕಿದ್ದು, ಕೂಡಲೇ ಅಪ್ರಾಪ್ತನನ್ನು ಬಂಧಿಸಿದ್ದಾರೆ. 6 ಗಂಟೆಗಳ ಕಾಲ ಹಲವು ಸುತ್ತುಗಳಲ್ಲಿ ವಿಚಾರಣೆ ನಡೆಸಲಾಯಿತು.ಅಪ್ರಾಪ್ತ ಕೂಡ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಲೇ ಇದ್ದ. ಅವನಲ್ಲಿ ಭಯವಿರಲಿಲ್ಲ. ಘಟನೆ ನಡೆದ ದಿನದಿಂದ ಪೊಲೀಸರು ತನಿಖೆಗೆ ಬಂದಾಗಲೆಲ್ಲ ಪೊಲೀಸರ ಮುಂದೆಯೇ ಓಡಾಡುತ್ತಿದ್ದ. ಪೊಲೀಸರು ಆರೋಪಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.