‘ಚಿತ್ರರಂಗದ ಪರವಾಗಿ ಕರುಣೆ ತೋರಿಸಿ, ದಯವಿಟ್ಟು ಈ ಉದ್ಯಮವನ್ನು ಕೊಲ್ಲಬೇಡಿ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಜಯಾ ಬಚ್ಚನ್ ಚಿತ್ರರಂಗದ ಜೊತೆ ನಂಟು ಹೊಂದಿದ್ದವರು. ಈಗ ಸಮಾಜಾವಾದಿ ಪಕ್ಷದಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ರಾಜ್ಯ ಸಭೆಯಲ್ಲಿ ಚಿತ್ರರಂಗದ ಪರವಾಗಿ ಧ್ವನಿ ಎತ್ತಿದ್ದಾರೆ. ಇತ್ತಿಚೆಗೆ ಘೋಷಿಸಿದ ಬಜೆಟ್ ಬಗ್ಗೆ ಮಾತನಾಡಿ, ಇದರಲ್ಲಿ ಚಿತ್ರರಂಗವನ್ನು ನಿರ್ಲಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

‘ಚಿತ್ರರಂಗವನ್ನು ನೀವು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದೀರಿ ಮತ್ತು ಇತರ ಸರ್ಕಾರಗಳು ಸಹ ಅದೇ ಕೆಲಸವನ್ನು ಮಾಡುತ್ತಿವೆ. ನೀವು ಈಗ ಇದನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದೀರಿ. ನೀವು ಸಿನಿಮಾ ರಂಗವನ್ನು ನಿಮ್ಮ ಸ್ವಂತ ಉದ್ದೇಶಕ್ಕಾಗಿ ಮಾತ್ರ ಬಳಸುತ್ತಿದ್ದೀರಿ’ ಎಂದು ಜಯಾ ಬಚ್ಚನ್ ದೂರಿದ್ದಾರೆ.

‘ನಾನು ನನ್ನ ಚಿತ್ರರಂಗದ ಪರವಾಗಿ ಮಾತನಾಡುತ್ತಿದ್ದೇನೆ. ದಯವಿಟ್ಟು ಸ್ವಲ್ಪ ಕರುಣೆ ತೋರಿ. ನೀವು ಈ ಉದ್ಯಮವನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದೀರಿ ಅದನ್ನು ಮಾಡಬೇಡಿ’ ಎಂದು ಮನವಿ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!