DO YOU KNOW | ಸಿಕ್ಕಾಪಟ್ಟೆ ಹಸಿವಾಗಿತ್ತು ಅಂತ ಗಡದ್ದಾಗಿ ಬ್ಯಾಟಿಂಗ್‌ ಮಾಡಿದ್ದೀರಾ? ಅತಿಯಾಗಿ ತಿಂದ ಮೇಲೆ ಈ ತಪ್ಪುಗಳನ್ನು ಮಾಡ್ಲೇಬಾರ್ದು!

ರುಚಿಕರವಾದ ಊಟ ಸಿಕ್ಕಾಗ ಹೆಚ್ಚು ತಿನ್ನೋದು ಸಾಮಾನ್ಯ. ಆದರೆ ಈ ರೀತಿ ಅತಿಯಾಗಿ ತಿಂದ ನಂತರ ಹಲವಾರು ಹೊಟ್ಟೆ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಹೊಟ್ಟೆ ತುಂಬಿರುವ ಭಾವನೆ, ಉಬ್ಬರೆ, ಅಲಸ್ಯ ಅಥವಾ ಖಿನ್ನತೆ ಸಾಮಾನ್ಯ. ಇಂಥ ಸಂದರ್ಭದಲ್ಲಿ ಹೆಚ್ಚಿನ ಆಹಾರ ಜೀರ್ಣವಾಗದೆ ಹೊಟ್ಟೆ ಮತ್ತು ಕರುಳಿಗೆ ಒತ್ತಡ ಉಂಟುಮಾಡುತ್ತದೆ, ಇದರಿಂದ ಆರೋಗ್ಯದ ಮೇಲೆ ಬಹಳ ಕೆಟ್ಟ ಪರಿಣಾಮಗಳು ಬೀಳಬಹುದು.

ಹೆಚ್ಚು ತಿಂದ ನಂತರ ನಮ್ಮ ದೇಹದಲ್ಲಿ ಏನು ನಡೆಯುತ್ತದೆ ಎಂಬ ಅರಿವಿದ್ದರೆ, ನಾವು ಅದರ ಪರಿಣಾಮಗಳನ್ನು ಕಡಿಮೆ ಮಾಡಬಹುದು. ಜೊತೆಗೆ ಕೆಲವೊಂದು ಸರಳ ಕ್ರಮಗಳನ್ನು ಅನುಸರಿಸುವುದರಿಂದ ದೇಹ ಮತ್ತೆ ಸರಾಗವಾಗಿ ಕಾರ್ಯನಿರ್ವಹಿಸಬಲ್ಲದು.

ತಕ್ಷಣಾ ಮಲಗುವುದು (Sleeping Immediately)
ಅತಿಯಾಗಿ ತಿಂದ ನಂತರ ಬೆಡ್ ಮೇಲೆ ಮಲಗುವುದು ಹೆಚ್ಚು ಸಾಮಾನ್ಯವಾದ ತಪ್ಪು. ಇದು ಆಹಾರ ಜೀರ್ಣವಾಗುವುದಕ್ಕೆ ತಡೆಯಾಗಿ, ಆಸಿಡ್ ರಿಫ್ಲಕ್ಸ್, ಗ್ಯಾಸ್ಟ್ರಿಕ್, ಹಾಗೂ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.

10 Reasons Why You Get Sleepy After Eating

ತಕ್ಷಣಾ ನೀರನ್ನು ಹೆಚ್ಚು ಕುಡಿಯುವುದು (Drinking Too Much Water Right After Eating)
ತಿನ್ನುತ್ತಿದ್ದಂತೆಯೇ ಅಥವಾ ತಿಂದ ತಕ್ಷಣವೇ ಹೆಚ್ಚು ನೀರು ಕುಡಿಯುವುದು ಜೀರ್ಣಕ್ರಿಯೆಯನ್ನು ವ್ಯತ್ಯಯ ಮಾಡಬಹುದು. ಇದರಿಂದ ಪೆಪ್ಟಿಕ್ ಎನ್ಜೈಮ್‌ ಗಳಿಗೆ ತೊಂದರೆಯಾಗಿ ಆಗಿ ಆಹಾರ ಜೀರ್ಣಕ್ಕೆ ತಡೆಯಾಗಬಹುದು.

Drinking water right after eating food? Here's what you need to know | Drinking News – India TV

ತಕ್ಷಣಾ ನಡೆಯುವುದು ಅಥವಾ ಜಾಗಿಂಗ್ (Going for a Walk or Jogging Right Away)
ಅತಿಯಾಗಿ ತಿಂದ ನಂತರ ತಕ್ಷಣಾ ವ್ಯಾಯಾಮ ಅಥವಾ ನಡೆಯಲು ಹೋಗುವುದು ಜೀರ್ಣಕ್ರಿಯೆಗೆ ತೊಂದರೆಯುಂಟುಮಾಡುತ್ತದೆ. ತಿನ್ನಿದ ಆಹಾರ ಇನ್ನೂ ಪಚಿಸದೇ ಇದ್ದರೆ, ಈ ಚಟುವಟಿಕೆ ಹೊಟ್ಟೆ ನೋವಿಗೆ ಕಾರಣವಾಗಬಹುದು.

The Role of Exercise in Eating Disorder Recovery | Walden

ಧೂಮಪಾನ ಅಥವಾ ತಂಬಾಕು ಸೇವನೆ (Smoking or Chewing Tobacco)
ಅತಿಯಾಗಿ ತಿಂದ ಮೇಲೆ ಧೂಮಪಾನ ಅಥವಾ ತಂಬಾಕು ಸೇವನೆ ಜೀರ್ಣಕ್ರಿಯೆಗೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಕ್ಯಾನ್ಸರ್ ನಂತಹ ರೋಗಗಳಿಗೆ ಕಾರಣವಾಗುವ ಸಾಧ್ಯತೆ ಹೆಚ್ಚಾಗುತ್ತದೆ.

Smoking and Chewing Tobacco: Both Bad for Dental Health

ತಕ್ಷಣಾ ಸ್ನಾನ ಮಾಡುವುದು (Taking a Bath Right After Eating)
ತಿಂದ ಕೂಡಲೇ ಸ್ನಾನ ಮಾಡುವುದು ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡುತ್ತದೆ. ಈ ಸಮಯದಲ್ಲಿ ರಕ್ತದ ಹರಿವು ಹೊಟ್ಟೆ ಕಡೆ ಇರಬೇಕಾದರೆ, ಸ್ನಾನದಿಂದ ಅದು ಚರ್ಮದ ಕಡೆ ಹರಿದು ಜೀರ್ಣಕ್ರಿಯೆಗೆ ತೊಂದರೆ ಉಂಟಾಗುತ್ತದೆ.

Is Bathing After Meals Healthy? Find More Such Dos and Don'ts After Meals | OnlyMyHealth

ಆಹಾರ ಸೇವನೆಯ ನಂತರ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವುದು ಆರೋಗ್ಯದ ದೀರ್ಘಕಾಲೀನ ಸಂರಕ್ಷಣೆಗೆ ಬಹುಮುಖ್ಯ. ಅತಿಯಾಗಿ ತಿಂದ ನಂತರ ಈ 5 ತಪ್ಪುಗಳನ್ನು ತಪ್ಪಿಸಿ, ನಿಮ್ಮ ದೈನಂದಿನ ಬದುಕಿನಲ್ಲಿ ಸಮತೋಲನ ಬೆಳೆಸಿಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!