ಸೌತ್ ಇಂಡಿಯಾದ ಜನಪ್ರಿಯ ಬೆಳಗಿನ ಉಪಹಾರಗಳಲ್ಲಿ ಒಂದಾದ ಇಡ್ಲಿಯನ್ನು ಹೊಸ ಸ್ಟೈಲ್‌ನಲ್ಲಿ ತಯಾರಿಸುವ ವಿಧಾನ ಇದೀಗ ಹೆಚ್ಚಾಗಿ ಟ್ರೆಂಡ್ ಆಗುತ್ತಿದೆ. ‘ಸ್ಪಾಟ್ ಇಡ್ಲಿ’ ಎಂದು ಕರೆಯಲ್ಪಡುವ ಈ ಪಾಕವಿಧಾನವು ಕೇವಲ ರುಚಿಗೇ ಅಲ್ಲ, ನೋಡೋಕು ಅಷ್ಟೇ ಸುಂದರವಾಗಿದೆ.
ಬೇಕಾಗುವ ಸಾಮಗ್ರಿಗಳು:
1 ಚಮಚ ಎಣ್ಣೆ
2 ಚಮಚ ಈರುಳ್ಳಿ , ನುಣ್ಣಗೆ ಕತ್ತರಿಸಿದ್ದು
½ ಟೀಸ್ಪೂನ್ ಶುಂಠಿ , ನುಣ್ಣಗೆ ಕತ್ತರಿಸಿದ್ದು
1 ಮೆಣಸಿನಕಾಯಿ , ಸಣ್ಣಗೆ ಹೆಚ್ಚಿದ
1 ಟೀಸ್ಪೂನ್ ಕೊತ್ತಂಬರಿ ಸೊಪ್ಪು , ನುಣ್ಣಗೆ ಕತ್ತರಿಸಿ
2 ಚಮಚ ಟೊಮೆಟೊ , ಕತ್ತರಿಸಿದ್ದು
1 ಟೀಸ್ಪೂನ್ ಕರಿಬೇವು ಎಲೆಗಳು , ಕತ್ತರಿಸಿದ್ದು
2 ಟೀಸ್ಪೂನ್ ಪೋಡಿ ಅಥವಾ ಗನ್ ಪೌಡರ್
1 ಟೀಸ್ಪೂನ್ ಬೆಣ್ಣೆ
1 ಬಟ್ಟಲು ಇಡ್ಲಿ ಹಿಟ್ಟು
ಹುರಿಯಲು ಬೆಣ್ಣೆ
ಮಾಡುವ ವಿಧಾನ:
ಮೊದಲು ಒಂದು ಪ್ಯಾನ್‌ನಲ್ಲಿ ಒಂದು ಟೇಬಲ್ಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ, ಎರಡು ಚಮಚ ಈರುಳ್ಳಿ, ಅರ್ಧ ಚಮಚ ಶುಂಠಿ, ಒಂದು ಮೆಣಸಿನಕಾಯಿ ಹಾಗೂ ಒಂದು ಚಮಚ ಕೊತ್ತಂಬರಿ ಸೊಪ್ಪು ಸೇರಿಸಿ, ಈರುಳ್ಳಿ ಮೃದುವಾಗುವವರೆಗೆ ಹುರಿಯಿರಿ.
ಅದರ ಬಳಿಕ ಎರಡು ಟೇಬಲ್ಸ್ಪೂನ್ ಟೊಮೆಟೊ ಹಾಗೂ ಒಂದು ಟೀಸ್ಪೂನ್ ಕರಿಬೇವು ಸೇರಿಸಿ, ಟೊಮೆಟೊ ಮೃದುವಾಗುವವರೆಗೆ ಬೇಯಿಸಿ. ನಂತರ ಎರಡು ಟೀಸ್ಪೂನ್ ಪೋಡಿ ಅಥವಾ ಗನ್ ಪೌಡರ್ ಮತ್ತು ಒಂದು ಟೀಸ್ಪೂನ್ ಬೆಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಮಿಶ್ರಣವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ, ಪ್ರತಿಯೊಂದು ಭಾಗಕ್ಕೂ ಸ್ವಲ್ಪ ಸ್ವಲ್ಪ ಇಡ್ಲಿ ಹಿಟ್ಟನ್ನು ಸುರಿದು, ಮೇಲಿನಿಂದ ಸ್ವಲ್ಪ ಪೋಡಿ ಅಥವಾ ಗನ್ ಪೌಡರ್, ಬೆಣ್ಣೆ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ, ಮುಚ್ಚಿ ಹತ್ತು ನಿಮಿಷಗಳ ಕಾಲ ಅಥವಾ ಹಿಟ್ಟು ಸಂಪೂರ್ಣ ಬೇಯುವವರೆಗೆ ಬೇಯಿಸಿ. ನಂತರ ಮಗುಚಿ ಹಾಕಿ ಇನ್ನೊಂದು ಬದಿ ಬೇಯಿಸಿದರೆ ಬಿಸಿ ಬಿಸಿ ಸ್ಪಾಟ್ ಇಡ್ಲಿ ರೆಡಿ.