Monday, September 8, 2025

FOOD | ಸೋರೆಕಾಯಿ ಇಡ್ಲಿ ಯಾವತ್ತಾದ್ರೂ ತಿಂದಿದ್ದೀರಾ? ಇಲ್ಲಿದೆ ಸಿಂಪಲ್ ರೆಸಿಪಿ

ಇಡ್ಲಿ ಎಂದರೆ ದಕ್ಷಿಣ ಭಾರತದ ಪ್ರಮುಖ ಉಪಹಾರಗಳಲ್ಲಿ ಒಂದು. ಸಾಮಾನ್ಯವಾಗಿ ಉದ್ದಿನ ಬೇಳೆ ಮತ್ತು ಅಕ್ಕಿ ಅಥವಾ ರವೆಯಿಂದ ತಯಾರಿಸುವ ಇಡ್ಲಿ, ಮೃದುವಾಗಿದ್ದು, ಹೊಟ್ಟೆಗೆ ಹಿತಕರವಾಗಿರುತ್ತದೆ. ಆದರೆ ವಿಶೇಷವಾಗಿ ಸೋರೆಕಾಯಿ ಬಳಸಿ ಮಾಡುವ ಇಡ್ಲಿ ಆರೋಗ್ಯಕರವಾಗಿದ್ದು, ರುಚಿಗೂ ಕಡಿಮೆಯಿಲ್ಲ. ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾಗಿದೆ.

ಬೇಕಾಗುವ ಸಾಮಗ್ರಿಗಳು

ಕಡಲೆ ಬೇಳೆ – 1 ಕಪ್
ಇಡ್ಲಿ ರವೆ – 1 ½ ಕಪ್
ಸೋರೆಕಾಯಿ ತುಂಡುಗಳು – 2 ಕಪ್
ಮೊಸರು – 1 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಅಡುಗೆ ಸೋಡಾ – ½ ಟೀಚಮಚ

ತಯಾರಿಸುವ ವಿಧಾನ:

ಮೊದಲಿಗೆ ಕಡಲೆ ಬೇಳೆ ತೊಳೆದು ಅರ್ಧ ಗಂಟೆ ಕಾಲ ನೆನೆಸಿಡಿ. ಇನ್ನೊಂದು ಬಟ್ಟಲಿನಲ್ಲಿ ಇಡ್ಲಿ ರವೆಯನ್ನು ಕೂಡ ಅರ್ಧ ಗಂಟೆ ನೆನೆಸಿಡಿ.

ಈಗ ಸೋರೆಕಾಯಿಯನ್ನು ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ಮಿಕ್ಸರ್ ಜಾರಿನಲ್ಲಿ ಸೋರೆಕಾಯಿ ತುಂಡುಗಳು, ಮೊಸರು, ಕಡಲೆ ಬೇಳೆ ಹಾಕಿ ರುಬ್ಬಿ. ಈ ಪೇಸ್ಟ್‌ಗೆ ನೆನೆಸಿದ ರವೆಯನ್ನು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಉಪ್ಪು ಮತ್ತು ಅಡುಗೆ ಸೋಡಾ ಸೇರಿಸಿ ಮಿಶ್ರಣ ಮಾಡಿ ಸ್ವಲ್ಪ ಹೊತ್ತು ಪಕ್ಕಕ್ಕೆ ಇಡಿ.

ಇಡ್ಲಿ ತಟ್ಟೆಗಳಲ್ಲಿ ಹಿಟ್ಟು ಹಾಕಿ, ಇಡ್ಲಿ ಪಾತ್ರೆಯಲ್ಲಿ ಬೇಯಿಸಿದರೆ ಬಿಸಿಬಿಸಿ ಸೋರೆಕಾಯಿ ಇಡ್ಲಿ ರೆಡಿ.

ಇದನ್ನೂ ಓದಿ