ಸಾಮಾಗ್ರಿಗಳು
ಸಿಹಿ ಗೆಣಸು – ಅರ್ಧ ಕೆಜಿ
ಗೋಧಿ ಹಿಟ್ಟು – 2 ಕಪ್
ಉಪ್ಪು – ಅರ್ಧ ಟೀಸ್ಪೂನ್
ಎಣ್ಣೆ – ಸಾಕಷ್ಟು
ಮಾಡುವ ವಿಧಾನ
ಮೊದಲಿಗೆ ಗೆಣಸುಗಳನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಸಾಕಷ್ಟು ನೀರು ಹಾಕಿ ನೆನೆಸಡಬೇಕಾಗುತ್ತದೆ.
10 ನಿಮಿಷಗಳ ಬಳಿಕ ಗೆಣಸುಗಳನ್ನು ಸ್ವಚ್ಛಗೊಳಿಸಿ ಹಾಗೂ ತುದಿಗಳನ್ನು ಕತ್ತರಿಸಿ. ಬಳಿಕ ಅವುಗಳನ್ನು ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕೆ ಇಡಿ.
ಒಲೆ ಆನ್ ಮಾಡಿ ಮತ್ತು ಕತ್ತರಿಸಿದ ಗೆಣಸಿನ ಪೀಸ್ಗಳನ್ನು ಪಾತ್ರೆಯಲ್ಲಿ ಹಾಕಿ, ಅವು ಮುಳುಗುವವರೆಗೆ ನೀರನ್ನು ಸುರಿಯಿರಿ ಮತ್ತು ಮೃದುವಾಗುವವರೆಗೆ ಬೇಯಿಸಿಕೊಳ್ಳಿ. ಸಿಪ್ಪೆ ಸುಲಿದು ಒಂದು ಬಟ್ಟಲಿನಲ್ಲಿ ಹಾಕಿಕೊಳ್ಳಿ. ನಂತರ ಅವುಗಳನ್ನು ನಿಧಾನವಾಗಿ ಮ್ಯಾಶ್ ಮಾಡಿಕೊಂಡು ಪಕ್ಕಕ್ಕೆ ಇಡಿ.
ಈಗ ಮಿಶ್ರಣಕ್ಕೆ ಗೋಧಿ ಹಿಟ್ಟು ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಗೆಣಸಿನ ಮಿಶ್ರಣವು ಸಂಪೂರ್ಣವಾಗಿ ಮಿಶ್ರಣವಾದ ನಂತರ, ಸ್ವಲ್ಪ ಸ್ವಲ್ಪವಾಗಿ ನೀರನ್ನು ಸೇರಿಸಿ ಮತ್ತು ಚಪಾತಿ ಹಿಟ್ಟಿನಂತೆ ಮೃದುವಾಗುವವರೆಗೆ ಕಲಸಿಕೊಳ್ಳಿ. ಬಳಿಕ 2 ಟೀಸ್ಪೂನ್ ಎಣ್ಣೆ ಅಥವಾ ತುಪ್ಪವನ್ನು ಹಚ್ಚಿ ಮತ್ತೆ ಮಿಶ್ರಣ ಮಾಡಿಕೊಳ್ಳಿ, ಬಳಿಕ ಮುಚ್ಚಿ ಪಕ್ಕಕ್ಕೆ ಇಡಿ.
ನಂತರ ಚಪಾತಿ ರೀತಿ ಲಟ್ಟಿಸಿ ಬೇಯಿಸಿದ್ರೆ ಗೆಣಸಿನ ಚಪಾತಿ ರೆಡಿ