ಅವಲಕ್ಕಿ – 1/2 ಕೆಜಿ
ಪುಳಿಯೋಗರೆ ಪುಡಿ ಅಥವಾ ಗೊಜ್ಜು- ಸ್ವಲ್ಪ
ಎಣ್ಣೆ-ಅಗತ್ಯಕ್ಕೆ ತಕ್ಕಷ್ಟು
ಉಪ್ಪು-ರುಚಿಗೆ ತಕ್ಕಷ್ಟು
ಕರಿಬೇವು- ಸ್ವಲ್ಪ
ಕಡಲೆಕಾಯಿ ಬೀಜ- ಸ್ವಲ್ಪ
ಅರಿಶಿಣ- ಸ್ವಲ್ಪ
ಕಡಲೆಬೇಳೆ, ಉದ್ದಿನ ಬೇಳೆ-ಸ್ವಲ್ಪ
ಸಾಸಿವೆ-ಸ್ವಲ್ಪ
ಹುಣಸೆಹಣ್ಣಿನ ರಸ- ಸ್ವಲ್ಪ
ಬೆಲ್ಲ-ಸ್ವಲ್ಪ
ಒಣಕೊಬ್ಬರಿ (ತುರಿದದ್ದು)- ಸ್ವಲ್ಪ
ಅವಲಕ್ಕಿ ಪುಳಿಯೋಗರೆ ಮಾಡುವ ವಿಧಾನ:
ಮೊದಲು ಅವಲಕ್ಕಿಯನ್ನು ಚೆನ್ನಾಗಿ ತೊಳೆದು ಅದನ್ನು ಸ್ವಲ್ಪ ಕಾಲ ನೆನೆಯಲು ಬಿಡಿ.
ನಂತರ ಸ್ಟೌ ಮೇಲೆ ಒಂದು ಪಾತ್ರೆಯನ್ನು ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಸೇರಿಸಿ. ಎಣ್ಣೆ ಸ್ವಲ್ಪ ಕಾದ ನಂತರ ಅದಕ್ಕೆ ಸಾಸಿವೆ, ಕಡಲೆಬೇಳೆ, ಕಡಲೆ ಬೀಜ, ಉದ್ದಿನಬೇಳೆ, ಕರಿಬೇವಿನ ಸೊಪ್ಪು ಹಾಗೂ ಅರಿಶಿಣ ಹಾಕಿ ಚೆನ್ನಾಗಿ ಅದನ್ನು ಹುರಿದುಕೊಳ್ಳಿ.
ನಂತರ ಇದಕ್ಕೆ ಪುಳಿಯೋಗರೆಯ ಪೌಡರ್ ಹಾಗೂ ಸ್ವಲ್ಪ ಬೆಲ್ಲ ಹುಣಸೆನ ಹುಳಿಯನ್ನು ಸೇರಿಸಿ ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ ಚೆನ್ನಾಗಿ ಕೈ ಆಡಿಸಿ.
ಇದರ ಮೊದಲೇ ನೆನಸಿಟ್ಟ ಅವಲಕ್ಕಿಯನ್ನು ಈ ಮಿಶ್ರಣಕ್ಕೆ ಸೇರಿಸಿ ನಂತರ ಅದಕ್ಕೆ ತುರಿದ ಕಾಯಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದು ಚೆನ್ನಾಗಿ ಬೆಂದ ನಂತರ ನಿಮಗೆ ಬೇಕಾದಲ್ಲಿ ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಸ್ವಲ್ಪ ಸಮಯ ಬೇಯಲಿಕ್ಕೆ ಬಿಟ್ಟು ನಂತರ ಸ್ಟವ್ ಅನ್ನು ಆಫ್ ಮಾಡಿ ಒಂದು ಪ್ಲೇಟಿಗೆ ಸರ್ವ ಮಾಡಿ.
ರುಚಿಯಾದ ಅವಲಕ್ಕಿ ಪುಳಿಯೋಗರೆ ಮನೆ ಮಂದಿ ಜೊತೆ ಕೂತು ಸವಿಯಲು ಸಿದ್ಧ.