ಹೊಸದಿಗಂತ ಡಿಜಿಟಲ್ ಡೆಸ್ಕ್:
2025ರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿರೋ ‘ಅನ್ನನಾ ಪಾತಿಯಾ ಅಪ್ಪಾತ್ ಕೇತಿಯಾ’ ಹಾಡು ಮಕ್ಕಳಿಂದ ಹಿಡಿದು ಎಲ್ಲರ ಬಾಯಲ್ಲೂ ಕೇಳಿಬರುತ್ತಿದೆ.
ಈ ಹಾಡು ಹಾಡಿದ ಸುಂದರಿ ಇಂಡೋನೇಷಿಯಾದ ಬೆಡಗಿ ನಿಕೇನ್ ಸಾಲಿಂದ್ರಿ. ಇಂಡೋನೇಷಿಯಾದ ಕೆದಿರಿ ಪ್ರಾಂತ್ಯದ ಈಕೆ ಇಂಡೋನೇಷಿಯನ್ ಭಾಷೆಯಲ್ಲಿ ಹಲವು ಆಲ್ಬಮ್ ಹಾಡುಗಳನ್ನು ಹಾಡಿದ್ದಾರೆ. ಯ್ಯೂಟ್ಯೂಬ್, ಟಿಕ್ಟಾಕ್ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾಗಳಲ್ಲಿ ಈಕೆಯ ಹಾಡು ಭಾರಿ ವೈರಲ್ ಹಾಗೂ ಜನಪ್ರಿಯತೆ ಪಡೆದುಕೊಂಡಿದೆ.
ಈಕೆ ಅತ್ಯಂತ ಜನಪ್ರಿಯ ಹಾಡುಗಾರ್ತಿ ಮಾತ್ರವಲ್ಲ, ಇದೀಗ ಉದ್ಯಮ ಕ್ಷೇತ್ರದಲ್ಲೂ ಮಿಂಚಿದ್ದಾಳೆ. ಈಕೆಯ ಬ್ರ್ಯಾಂಡ್ ಟಿ ಶರ್ಟ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ ಭಾರತದಲ್ಲೂ ನಿಕೇನ್ ಸಾಲಿಂದ್ರಿ ಜನಪ್ರಿಯಳಾಗಿದ್ದಾಳೆ.