ಮಕ್ಕಳಿಗೆ ಈಗಿನ್ನ ಸಾಲಿಡ್ ಫುಡ್ ಶುರು ಮಾಡಿದ್ದೀರಾ? ಹಾಗಿದ್ರೆ ಈ ಸ್ಟೋರಿಯಿಂದ ನಿಮಗೆ ಸಹಾಯವಾಗ್ಬೋದು.. ಮಕ್ಕಳಿಗೆ ನೀವು ಈಗ ಎಷ್ಟು ಒಳ್ಳೆಯ ಆಹಾರ ತಿನ್ನಿಸುತ್ತೀರಿ ಎನ್ನುವುದು ಮುಂದಿನ ಅವರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಯಾವೆಲ್ಲಾ ಆಹಾರ ಬೆಸ್ಟ್ ನೋಡಿ..
ಗೆಣಸು
ಗೆಣಸನ್ನು ತೊಳೆದು ಚೆನ್ನಾಗಿ ಬೇಯಿಸಿ ಸ್ಮಾಶ್ ಹಾಕಿ
ಇದಕ್ಕೆ ಹಾಲು ಹಾಕಿ ಪ್ಯೂರಿ ರೀತಿ ಮಾಡಿ ತಿನ್ನಿಸಿ.
ಅನ್ನ+ತರಕಾರಿ
ಅಕ್ಕಿ, ಬೇಳೆ, ನಿಮ್ಮಿಷ್ಟದ ತರಕಾರಿ, ಚಿಟಿಕೆ ಅರಿಶಿಣ, ಉಪ್ಪು, ಶುಂಠಿ ಬೆಳ್ಳುಳ್ಳಿ ಹಾಕಿ ವಿಶಲ್ ಕೂಗಿಸಿ ಬೇಯಿಸಿ ಸ್ಮಾಶ್ ಮಾಡಿ ತಿನ್ನಿಸಿ
ಹಣ್ಣುಗಳ ಪ್ಯೂರಿ
ನಿಮ್ಮಿಷ್ಟದ ಯಾವುದೇ ಎರಡು ಅಥವಾ ಮೂರು ಹಣ್ಣುಗಳನ್ನು ಮಿಕ್ಸಿ ಮಾಡಿ ಅದಕ್ಕೆ ಹಾಲು ಹಾಕಿ
ಹಣ್ಣುಗಳು ಸಿಹಿ ಇಲ್ಲದಿದ್ರೆ ಡೇಟ್ಸ್ ಜಾಮ್ ಹಾಕಿ
ರಾಗಿ ಸರಿ
ರಾಗಿಯನ್ನು ತೊಳೆದು ಒಳಗಿಸಿ ನಂತರ ಬಿಸಿ ಮಾಡಿ ಪುಡಿ ಮಾಡಿ
ಸೋಸಿ ತುಪ್ಪ ಹಾಗೂ ನೀರು ಹಾಕಿ ಪ್ಯೂರಿ ಮಾಡಿ ಬೇಯಿಸಿ ತಿನ್ನಿಸಬಹುದು