ಸಂಜೆ ಚಹಾದ ಜೊತೆ ಏನಾದರೂ ಗರಿಗರಿಯಾದ ತಿಂಡಿ ತಿನ್ನಬೇಕು ಅನ್ನೋದು ಎಲ್ಲರಿಗೂ ಸಹಜ ಆಸೆ. ಹೊರಗೆ ಸಿಗುವ ಬೇಕರಿ ಐಟಂಗಳಿಗಿಂತ ಮನೆಯಲ್ಲಿ ಮಾಡಿದರೆ ಆರೋಗ್ಯಕರವೂ, ರುಚಿಕರವೂ ಆಗಿರುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇಷ್ಟವಾಗುವ ತಿಂಡಿಯೇ ಕ್ರಿಸ್ಪಿ ಬೇಬಿಕಾರ್ನ್ ಫ್ರೈ. ಇದು ಚಹಾದ ಜೊತೆಗೆ ಸವಿಯಲು ಸೂಪರ್ ಸ್ನ್ಯಾಕ್.
ಬೇಕಾಗುವ ಸಾಮಗ್ರಿಗಳು:
ಬೇಬಿ ಕಾರ್ನ್ – 1 ಬೌಲ್
ಕಡಲೆ ಹಿಟ್ಟು – 1 ಬೌಲ್
ಬ್ರೆಡ್ ಪೌಡರ್ – 1 ಬೌಲ್
ಅಕ್ಕಿ ಹಿಟ್ಟು – 1 ಚಮಚ
ಖಾರದ ಪುಡಿ – 1 ಚಮಚ
ಕಾಳುಮೆಣಸಿನ ಪುಡಿ – ½ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು ಬೇಕಾದಷ್ಟು
ಮಾಡುವ ವಿಧಾನ:
ಮೊದಲು ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಖಾರದ ಪುಡಿ, ಕಾಳುಮೆಣಸಿನ ಪುಡಿ ಹಾಗೂ ಉಪ್ಪು ಹಾಕಿ ಸ್ವಲ್ಪ ನೀರಿನಲ್ಲಿ ದಪ್ಪ ಮಿಶ್ರಣ ಮಾಡಿಕೊಳ್ಳಿ.
ಬೇಬಿಕಾರ್ನ್ ತುಂಡುಗಳನ್ನು ಈ ಮಿಶ್ರಣದಲ್ಲಿ ಅದ್ದಿ ತೆಗೆದು, ಮೇಲೆ ಬ್ರೆಡ್ ಪೌಡರ್ ಮೇಲೆ ಉರುಳಿಸಿ.ಕಾದ ಎಣ್ಣೆಯಲ್ಲಿ ಈ ಬೇಬಿಕಾರ್ನ್‌ಗಳನ್ನು ಹಾಕಿ ಗೋಲ್ಡನ್ ಬಣ್ಣ ಬರುವವರೆಗೆ ಕರಿದರೆ ಬಿಸಿಬಿಸಿ ಬೇಬಿಕಾರ್ನ್ ಫ್ರೈ ರೆಡಿ.