ಹೊಸದಿಗಂತ ಡಿಜಿಟಲ್ ಡೆಸ್ಕ್:
ವೀಳ್ಯದೆಲೆಯನ್ನು ಬಾಯಿಗೆ ಹಾಕಿ ಕೆಂಪಗಾಗಿಸಿ ಉಗುಳುವುದನ್ನು ನೋಡಿದ್ದೇವೆ. ಆದರೆ ಚಿತ್ರಾನ್ನ ಮಾಡಬಹುದೇ ? ಹೌದು ಅದ್ಭುತ ಔಷಧೀಯ ಗುಣ ಹೊಂದಿರುವ ಈ ವೀಳ್ಯದೆಲೆಯನ್ನು ಚಿತ್ರಾನ್ನದಲ್ಲಿ ಬಳಕೆ ಮಾಡಬಹುದು. ಇದು ಆರೋಗ್ಯಕ್ಕೂ ಉತ್ತಮ. ರುಚಿಯೂ ಹೌದು.
ಬೇಕಾಗುವ ಸಾಮಾಗ್ರಿ:
ಮೈಸೂರು ವೀಳ್ಯದೆಲೆ : 15, ತುಪ್ಪ 3 ಟೀ ಸ್ಪೂನ್, ತೆಂಗಿನ ಕಾಯಿ ತುರಿ 1 ಕಪ್, ಹಸಿಮೆಣಸು 5, ಸಾಸಿವೆ ಸ್ವಲ್ಪ, ಇಂಗು ಸ್ವಲ್ಪ, ಶುದ್ಧ ಕೊಬ್ಬರಿ ಎಣ್ಣೆ ನಾಲ್ಕು ಟೀ ಸ್ಪೂನ್, ರುಚಿಗೆ ಬೇಕಾದಷ್ಟು ಉಪ್ಪು,ಹುಣಸೆ ಹುಳಿ ಒಂದು ನಿಂಬೆ ಗಾತ್ರದ್ದು, ಅಷ್ಟೇ ಗಾತ್ರದ ಬೆಲ್ಲದ ತುಂಡು , ಬೆಳ್ತಿಗೆ ಅಕ್ಕಿ ಅನ್ನ (ಒಂದು ಲೋಟ ಅಕ್ಕಿಯದ್ದು), ಕರಿಬೇವು, ಉದ್ದಿನ ಬೇಳೆ, ಒಣ ಮೆಣಸಿನಚೂರು, ಕೊಬ್ಬರಿ ಎಣ್ಣೆ, ಅರಶಿನ ಹುಡಿ ನೆಲಕಡಲೆ.
ಮಾಡುವ ವಿಧಾನ:
ವೀಳ್ಯದೆಲೆಯನ್ನು ಸರಿಯಾಗಿ ತೊಳೆದು ಸಣ್ಣದಾಗಿ ಹೆಚ್ಚಿಟ್ಟುಕೊಂಡು ತುಪ್ಪ ಸೇರಿಸಿ ಹುರಿಯಿರಿ. ಚೆನ್ನಾಗಿ ಫ್ರೈ ಆದ ಮೇಲೆ ಕಾಯಿತುರಿ, ಹಸಿಮೆಣಸಿನಕಾಯಿ, ಸಾಸಿವೆ, ಇಂಗು, ಹುಣಸೆ ಹುಳಿ, ಬೆಲ್ಲದ ತುಂಡು, ಅರಶಿನ ಹುಡಿ, ಉಪ್ಪು ಹಾಕಿ ರುಬ್ಬಿಕೊಳ್ಳಿ. ಬಾಣೆಲೆಯನ್ನು ಬಿಸಿಗಿಟ್ಟುಕೊಂಡು ತೆಂಗಿನೆಣ್ಣೆಯನ್ನು ಹಾಕಿ ಬಿಸಿಮಾಡಿ. ನೆಲಕಡಲೆಯನ್ನು ಹಾಕಿ ಫ್ರೈಮಾಡಿ. ನಂತರ ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ತುಸು ಹೊತ್ತು ಬಾಣಲೆಯಲ್ಲಿ ಬಿಡಿ. ಅನ್ನವನ್ನು ಸೇರಿಸಿ ಮಿಶ್ರಮಾಡಿಕೊಳ್ಳಿ. ಬಿಸಿ ಬಿಸಿಯಾದ ಚಿತ್ರಾನ್ನ ರುಚಿಯೂ ಹೌದು. ಆರೋಗ್ಯಕ್ಕೂ ಉತ್ತಮ.