ಹೊಸದಿಗಂತ ವರದಿ ಹಾವೇರಿ:
ನಗರದ ಹೊರವಲಯದಲ್ಲಿ ಶುಕ್ರವಾರ ನಡೆದ ಅಪಘಾತದಲ್ಲಿ ಮೃತರಿಗೆ ಸರ್ಕಾರ ತಲಾ ಎರಡು ಲಕ್ಷಗಳ ಪರಿಹಾರ ಘೋಷಣೆ ಮಾಡಿದೆ. ಇದರ ಜತೆಗೆ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಮ್ಮ ವೈಯುಕ್ತಿಕವಾಗಿ ಮೃತರ ಕುಟುಂಬಕ್ಕೆ ತಲಾ 50ಸಾವಿರ ರೂ.ಗಳನ್ನು ನೀಡುವುದಾಗಿ ಘೊಷಣೆ ಮಾಡಿದ್ದಾರೆ.
ಭದ್ರಾವತಿ ಮೂಲದ ಪರಸ್ಪರ ಸಂಬಂಧಿಕರಾದ ಈ ಎಲ್ಲಾ ಮೃತರು ಮರಾಠಾ ಸಮುದಾಯಕ್ಕೆ ಸೇರಿದವರು. ಈ ಕುರಿತು ಮರಾಠಾ ಸಮಾಜದ ಭದ್ರಾವತಿ ತಾಲೂಕಾ ಅಧ್ಯಕ್ಷ ಲೋಕೇಶ್ವರರಾವ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ತಲಾ 10ಲಕ್ಷಗಳ ಪರಿಹಾರಕ್ಕೆ ಮನವಿ ಮಾಡಿದ್ದೇವೆ. ಆದರೆ ಸರ್ಕಾರ 2ಲಕ್ಷ ಘೋಷಣೆ ಮಾಡಿದ್ದು, ಅದು ಇಂದಿನ ದಿನಮಾನಗಳಲ್ಲಿ ಯಾತಕ್ಕೂ ಸಾಲದು, ಇದನ್ನು ಕನಿಷ್ಟ 5ಲಕ್ಷಕ್ಕೆ ಏರಿಸಬೇಕೆಂದು ಆಗ್ರಹಿಸಿದ್ದಾರೆ.