ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾವೇರಿಯ ಭೀಕರ ಅಪಘಾತದಲ್ಲಿ ಭದ್ರಾವತಿ ಮೂಲದ ಹದಿಮೂರು ಮಂದಿ ಮೃತಪಟ್ಟಿದ್ದಾರೆ. ದೇವರ ದರುಶನಕ್ಕೆ ತೆರಳಿದ್ದ ಜನರು ಪ್ರಾಣಬಿಟ್ಟಿರುವುದನ್ನು ಕಂಡು ಇಡೀ ರಾಜ್ಯವೇ ಮರುಗಿದೆ.
ಸಿಎಂ ಸಿದ್ದರಾಮಯ್ಯ ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿ ಘೋಷಣೆ ಮಾಡಿದ್ದಾರೆ. ಆದರೆ 15-20 ಲಕ್ಷ ರೂಪಾಯಿ ಘೋಷಣೆ ಮಾಡಿ ಎಂದು ಮೃತರ ಸಂಬಂಧಿಕರು ಪಟ್ಟು ಹಿಡಿದಿದ್ದಾರೆ.
ಮೃತ ಹದಿಮೂರು ಜನರು ಮರಾಠ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರೆಲ್ಲರು ಕಡುಬಡತನ ಕುಟುಂಬದವರು. ಅವರಿಗೆ ಸೂಕ್ತ ಪರಿಹಾರ ಘೋಷಣೆ ಮಾಡಬೇಕು. ತಲಾ ಒಬ್ಬೊಬ್ಬರಿಗೆ 15-20 ಲಕ್ಷ ಹಣ ಘೋಷಣೆ ಮಾಡಬೇಕು. ಇಲ್ಲವಾದರೆ ನಾವು ಅಂತ್ಯಕ್ರಿಯೆ ಮಾಡೊಲ್ಲ. ಮೃತದೇಹಗಳನ್ನು ತೆಗೆದುಕೊಂಡು ಹೊಗೊಲ್ಲಾ ಎಂದು ಬಿಗಿಪಟ್ಟು ಹಿಡಿಸಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈಗ ಹೇಗೆ ಜೀವನ ಸಾಗಿಸಬೇಕು. ಕೂಡಲೆ ಶಿವಮೊಗ್ಗ ಹಾಗೂ ಹಾವೇರಿ ಸಂಸದರು ಧ್ವನಿ ಎತ್ತಬೇಕು. ಪರಿಹಾರ ಕೊಡಿಸುವ ಕೆಲಸ ಮಾಡಬೇಕೆಂದು ಮೃತರ ಸಂಬಂಧಿಕರು ಹಾಗೂ ಸಮುದಾಯದ ಅಧ್ಯಕ್ಷ ಒತ್ತಡ ಹಾಕಿದ್ದಾರೆ.