ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾವೇರಿಯ ಆಲದಕಟ್ಟಿ ಬಳಿ ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿ ಮೂವರು ಮೃತಪಟ್ಟ ದುರಂತಕ್ಕೆ ಸಂಭವಿಸಿದಂತೆ ಶೀಘ್ರ ತನಿಖೆ ಮಾಡಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಈಗಾಗಲೇ ಪಟಾಕಿ ಅಂಗಡಿ ಮಾಲೀಕರಾದ ಜಯಣ್ಣ, ವೀರೇಶ್‌ಮ ಕುಮಾರಪ್ಪ ಹಾಗೂ ವಿಜಯ್ ಎನ್ನುವವರ ವಿರುದ್ಧ ಪ್ರಕರಣ ದಾಖಲಾಗಿದೆ.
ಪಟಾಕಿ ಗೋದಾಮಿನಲ್ಲಿ ಕೆಲಸ ಮಾಡುವ ಯಾವುದೇ ಕಾರ್ಮಿಕರಿಗೆ ಮಾಲೀಕರು ಸುರಕ್ಷತೆ ಒದಗಿಸಿಲ್ಲ ಎನ್ನಲಾಗಿದೆ. ನಿನ್ನೆ ದುರಂತ ಸಂಭವಿಸಿದ್ದು, ಮೃತರ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಬೊಮ್ಮಾಯಿ ಘೋಷಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು, ಕಾರ್ಮಿಕರು ಸುರಕ್ಷತೆ ನಡುವೆ ಕೆಲಸ ಮಾಡುವಂತಿರಬೇಕು ಎಂದಿದ್ದಾರೆ.