ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾವೇರಿ ಜಿಲ್ಲೆಯ ದೂದಿಹಳ್ಳಿಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅರ್ಚನಾ ಗೌಡಣ್ಣವರ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಳು. ಈ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದ್ದು, ಇದು ಕಿರುಕುಳ ಪ್ರಕರಣವಾಗಿದೆ.
ಅರ್ಚನಾ ದೂದಿಹಳ್ಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇದೇ ಶಾಲೆಯಲ್ಲಿ ಶಿಕ್ಷಕನಾಗಿದ್ದ ಆರೀಫ್ವುಲ್ಲಾ ಪುತ್ರಿ ಝೋಯಾ ಓದುತ್ತಿದ್ದು, ಅರ್ಚನಾ ಮತ್ತು ಝೋಯಾ ಒಂದೇ ಕ್ಲಾಸ್ಮೆಂಟ್ ಆಗಿದ್ದರಿಂದ ಇಬ್ಬರು ಸ್ನೇಹಿತರಾಗಿದ್ದರು.
ಝೋಯಾಗಿಂತ ಅರ್ಚನಾ ಓದಿನಲ್ಲಿ ಸ್ವಲ್ಪ ಮುಂದಿದ್ದಳು. ಇದನ್ನು ಸಹಿಸಿಕೊಳ್ಳದ ಶಿಕ್ಷಕ ಆರೀಫ್ವುಲ್ಲಾ, ಅರ್ಚನಾಳನ್ನು ಮನೆಗೆ ಕರೆಯಿಸಿಕೊಂಡು ಕಿರುಕುಳ ನೀಡಿದ್ದ. ನನ್ನ ಮಗಳಿಗಿಂತ ನಿನಗೆ ಒಳ್ಳೆ ಮಾರ್ಕ್ಸ್ ಬರಬಾರದು ಎಂದು ಆವಾಜ್ ಹಾಕಿದ್ದ. ಇದರಿಂದ ಮನನೊಂದ ಅರ್ಚನಾ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಳು. ಡೆತ್‌ನೋಟ್‌ನಲ್ಲಿ ಬರೆದ ಅಂಶಗಳನ್ನು ಗಂಭೀರವಾಗಿ ತೆಗೆದುಕೊಳ್ಳದ ಅರ್ಚನಾ ಪೋಷಕರು ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದರು.
ಇದೀಗ ಪೊಲೀಸರು ಅನುಮಾನ ಬಂದ ಕಾರಣ ಅರ್ಚನಾ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.