ಸ್ವಲ್ಪ ಓಡಾಟ ಮಾಡುತ್ತಿದ್ದಂತೆಯೇ ಕಾಲು ನೋವು ಎನಿಸ್ತಿದ್ಯಾ? ಬಲವಾದ ಸ್ನಾಯುಗಳಿಗಾಗಿ ಈ ಐದು ಟಿಪ್ಸ್
ಬೆಚ್ಚಗಿನ ಎಣ್ಣೆ ಮಸಾಜ್ : ದಿನಕ್ಕೆ ಎರಡು ಬಾರಿ, ಬೆಚ್ಚಗಿನ ಆಲಿವ್ ಎಣ್ಣೆ, ತೆಂಗಿನಕಾಯಿ ಅಥವಾ ಸಾಸಿವೆ ಎಣ್ಣೆಯಿಂದ ನಿಮ್ಮ ಕಾಲುಗಳನ್ನು ಮಸಾಜ್ ಮಾಡಿ. ಇದು ಕಾಲುಗಳನ್ನು ಬಲಪಡಿಸುವ ಮತ್ತು ಅವುಗಳಿಗೆ ರಕ್ತ ಪರಿಚಲನೆ ಸುಧಾರಿಸುವ ಮೂಲಕ ಅಸ್ವಸ್ಥತೆ, ಎಡಿಮಾ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.
ಆಪಲ್ ಸೈಡರ್ ವಿನೆಗರ್ : ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಬಿ ವಿಟಮಿನ್-ಆರೋಗ್ಯಕರ ಸ್ನಾಯುಗಳಿಗೆ ಅಗತ್ಯವಿರುವ ಎಲ್ಲವೂ ಆಪಲ್ ಸೈಡರ್ ವಿನೆಗರ್ನಲ್ಲಿ ಹೇರಳವಾಗಿದೆ. ಅಲ್ಲದೇ ಆಪಲ್ ಸೈಡರ್ ವಿನೆಗರ್ನ ಅಸಿಟಿಕ್ ಆಮ್ಲವು ಆಹಾರದಿಂದ ಪ್ರಮುಖ ಪೋಷಕಾಂಶಗಳನ್ನು ಹೀರಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ.
ನಿಯಮಿತ ವ್ಯಾಯಾಮ : ವಾರಕ್ಕೆ ಐದು ಬಾರಿ ಅಥವಾ ಕನಿಷ್ಟ 30 ನಿಮಿಷಗಳ ವಾಕಿಂಗ್ ಗೆ ತಜ್ಞರು ಸಲಹೆ ನೀಡುತ್ತಾರೆ. ಕಾಲುಗಳನ್ನು ಬಲಪಡಿಸುವ ಚಟುವಟಿಕೆಗಳು, ಬೈಕಿಂಗ್, ಟ್ರೆಕ್ಕಿಂಗ್, ಈಜು, ಜಾಗಿಂಗ್ ಮತ್ತು ವಾರದಲ್ಲಿ ಕೆಲವು ಬಾರಿ ಓಡುವುದು ಸಹ ಪ್ರಯೋಜನಕಾರಿಯಾಗಿದೆ.
ಸಾಕಷ್ಟು ವಿಟಮಿನ್ ಡಿ ಪಡೆಯಿರಿ : ಕಾಲಿನ ಸ್ನಾಯು ದೌರ್ಬಲ್ಯವು ವಿಟಮಿನ್ ಡಿ ಕೊರತೆಯ ಪರಿಣಾಮವಾಗಿದೆ ಎಂದು ಸಂಶೋಧನೆ ತೋರಿಸಿದೆ. ವಿಟಮಿನ್ ಡಿ ಹೆಚ್ಚಿರುವ ಆಹಾರವನ್ನು ಸೇವಿಸುವ ಮೂಲಕ ಮತ್ತು ಪ್ರತಿದಿನ ಬೆಳಗ್ಗೆ ಸೂರ್ಯನಲ್ಲಿ ಸ್ವಲ್ಪ ಸಮಯ ಕಳೆಯುವ ಮೂಲಕ ಇದನ್ನು ಪಡೆಯಬಹುದು.
ಹೆಚ್ಚು ನೀರು ಕುಡಿಯುವುದು : ಸ್ನಾಯುಗಳ ಸೆಳೆತ ಮತ್ತು ಕಾಲುಗಳಲ್ಲಿ ದೌರ್ಬಲ್ಯಕ್ಕೆ ಸಾಮಾನ್ಯ ಕಾರಣವೆಂದರೆ ನಿರ್ಜಲೀಕರಣ.ಹಾಗಾಗಿ ಸಾಕಷ್ಟು ನೀರು ಕುಡಿಯಿರಿ. ಹೆಚ್ಚು ನೀರನ್ನು ಹೊಂದಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ.