ಹೊಸ ದಿಗಂತ ವರದಿ, ಮುಂಡಗೋಡ:
ಮುಂಡಗೋಡ ತಾಲೂಕಿನ ಪಾಳಾ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ 6 ಟ್ರ್ಯಾಕ್ಟರ್ ನಷ್ಟು ಹುಲ್ಲಿನ ಬಣವೆ ಹಾಗು 170 ಭತ್ತದ ಹುಲ್ಲಿನ ರೋಲರ್ ಪೆಂಡಿಗಳು ಸುಟ್ಟು ಹಾನಿಯಾದ ಘಟನೆ ಶನಿವಾರ ಸಾಯಂಕಾಲ ಜರುಗಿದೆ.
ಪಾಳಾ ಗ್ರಾಮದ ರವಿಕುಮಾರ ಗುಡುಗುಡಿ ಅವರಿಗೆ ಸೇರಿದ ಆರು ಟ್ರ್ಯಾಕ್ಟರ್ ಹುಲ್ಲಿನ ಬಣವೆ ಹಾಗೂ ರವಿ ಚಲವಾದಿ ರವರಿಗೆ ಸೇರಿದ 170 ಭತ್ತದ ಹುಲ್ಲಿನ ರೋಲರ್ ಪೆಂಡಿಗಳಿಗೆ ಆಕಸ್ಮಿಕ ಬೆಂಕಿ ತಗುಲಿದ್ದು ಗ್ರಾಮಸ್ಥರು ಬೆಂಕಿ ನಂದಿಸಲು ಮುಂದಾದರು ಹತೋಟಿಗೆ ಬಾರದೆ ಇದ್ದಾಗ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಠಾಣೆಯವರು ಬೆಂಕಿ ನಂದಿಸಲು ಮುಂದಾಗಿದ್ದರು ಎನ್ನಲಾಗಿದೆ . ಈ ಅವಘಡದಿಂದ ಹಾನಿ ಎಷ್ಟು ಆಗಿದೆ ಎಂಬ ವರದಿ ತಿಳಿದು ಬಂದಿಲ್ಲ

