ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ಕುಟುಂಬದ ಜತೆ ಯುರೋಪ್ ಪ್ರವಾಸ ಕೈಗೊಂಡಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಇದೀಗ ಮತ್ತೆ ವಿದೇಶ ಪ್ರಯಾಣ ಬೆಳೆಸಿದ್ದಾರೆ.
ನಿನ್ನೆ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಪ್ತರೊಂದಿಗೆ ಮಲೇಶಿಯಾಗೆ ಎಚ್‌ಡಿಕೆ ತೆರಳಿದ್ದಾರೆ. ಈ ಬಾರಿ ಎಚ್‌ಡಿಕೆ ಸಾರಾ ಮಹೇಶ್, ರಮೇಶ್ ಗೌಡ ಕೂಡ ಸಾಥ್ ನೀಡಿದ್ದಾರೆ. ಎಚ್‌ಡಿಕೆ ಯಾಕೆ ಹೋಗಿದ್ದಾರೆ? ಏನು ವಿಶೇಷ ಅಥವಾ ಇದಕ್ಕೆ ರಾಜಕೀಯದ ಲಿಂಕ್ ಇದೆಯಾ? ಕಾದುನೋಡಬೇಕಿದೆ.