ಹೊಸದಿಗಂತ ವರದಿ, ವಿಜಯಪುರ:
ನನಗೆ ಬೇಕಾಗಿರುವುದು ನಮ್ಮ ನಾಡಿನ ಜನರ ಬದುಕು. ಇವತ್ತು ರೈತರು ಕಂಗಾಲಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಗುರುವಾರ ಮಾತನಾಡಿದ ಅವರು, ಸಿಡಿ ವಿಚಾರ ನನಗೆ ಗೊತ್ತಿಲ್ಲ. ಆದರೆ, ಯುವಕರಿಗೆ ಉದ್ಯೋಗ ಇಲ್ಲ.
ಇವತ್ತು ಹಳ್ಳಿಗಳಲ್ಲಿ ತಮ್ಮ ಪ್ರತಿನಿತ್ಯದ ಬದುಕಿಗಾಗಿ ಮಹಿಳೆಯರು ನೋವು ಅನುಭವಿಸುತ್ತಿದ್ದಾರೆ.
ಇದನ್ನ ಸರಿಪಡಿಸೋದು ಹೇಗೆ ಅನ್ನೋದು ನನ್ನ ಚಿಂತೆ ಆಗಿದೆ.
ಅವ್ರಿಗೆ ಸಿಡಿ ಚಿಂತೆ ಮತ್ತೊಂದು ಇಟ್ಕೊಂಡು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಅದನ್ನೆಲ್ಲಾ ಅವರು ಮುಂದುವರೆಸಿಕೊಂಡು ಹೋಗಲಿ. ನಾನು ನನ್ನ ಜನರ ಪರವಾದ ಧ್ವನಿ ಎತ್ಕೊಂಡು ಹೋರಾಟ ಮಾಡ್ತೀನಿ ಎಂದರು.
ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ಚರ್ಚೆ ಮಾಡೋದ್ರಲ್ಲಿ ಅರ್ಥವೇ ಇಲ್ಲ. ಆ ಬಜೆಟ್’ನಲ್ಲಿ ಹುಳುಕುಗಳು ದೊಡ್ಡ ಮಟ್ಟದಲ್ಲಿ ಇವೆ ಎಂದರು.