ರಮೇಶ್ ಹಾಗೂ ಸುರೇಶ್ ಪ್ರಾಣ ಸ್ನೇಹಿತರು. ಎಲ್ಲಿಗ ಹೋದರೂ ಒಟ್ಟಿಗೇ ಹೋಗುತ್ತಿದ್ದರು. ರಮೇಶ್ ಸುರೇಶ್‌ಗೆ ಸದಾ ಎಲ್ಲಾ ವಿಷಯದಲ್ಲಿಯೂ ಸಹಾಯ ಮಾಡ್ತಾ ಇದ್ದ. ಅವನ ಪ್ರಾಜೆಕ್ಟ್, ಕೆಲಸ ಎಲ್ಲದರಲ್ಲೂ ಸಹಾಯ ಮಾಡ್ತಾ ಇದ್ದ. ಆದರೆ ಸುರೇಶ್ ಅಷ್ಟಕಷ್ಟೆ. ಎಲ್ಲರೆದುರು ರಮೇಶ್ ನನ್ನ ಬೆಸ್ಟ್ ಫ್ರೆಂಡ್ ಎಂದು ಹೇಳುತ್ತಿದ್ದ. ಆದರೆ ಆ ರೀತಿ ನಡೆದುಕೊಳ್ಳುತ್ತಿರಲಿಲ್ಲ. ಆದರೆ ರಮೇಶ್‌ಗೆ ಇದು ಅರ್ಥ ಆಗಿರಲಿಲ್ಲ. ನನ್ನ ಸ್ನೇಹಿತ ಎಂದಷ್ಟೇ ಯೋಚಿಸುತ್ತಿದ್ದ.
ಹೀಗೆ ಸುರೇಶ್ ಮನೆಯಲ್ಲಿ ಪೂಜೆ ಇತ್ತು. ಹಾಗಾಗಿ ಸುರೇಶ್, ರಮೇಶ್ ಇಬ್ಬರೂ ಹಳ್ಳಿಗೆ ಬಂದ್ರು. ಹಾಗೆ ಕಾಡಿನಲ್ಲಿ ವಾಕ್ ಮಾಡಲು ಹೊರಟರು. ವಾಕ್ ಮಾಡುತ್ತಾ ಮಾಡುತ್ತಾ ಕಾಡಿನ ಒಳಗೆ ಹೋಗಿಬಿಟ್ಟರು.
ದೂರದಲ್ಲಿ ಕರಡಿಯೊಂದು ಬರುತ್ತಿರುವುದು ಕಾಣಿಸಿತ್ತು. ಸುರೇಶ್ ಹಿಂದೆ ಮುಂದೆ ನೋಡದೆ ದೂರಕ್ಕೆ ಓಡಿ ಹೋಗಿ ಮರವೊಂದನ್ನು ಏರಿದ. ರಮೇಶ್‌ಗೆ ಮರ ಹತ್ತೋಕೆ ಬರೋದಿಲ್ಲ. ಓಡೋದಕ್ಕೂ ಆಗುತ್ತಿಲ್ಲ. ಆತ ತಕ್ಷಣವೇ ಸತ್ತವರಂತೆ ಉಸಿರುಹಿಡಿದು ಮಲಗಿಬಿಟ್ಟ. ಕರಡಿ ಬಂದಿತು. ಆತನನ್ನು ಮೂಸಿತು. ಸತ್ತಿದ್ದಾನೆ ಎಂದು ಮುಟ್ಟದೇ ಮುಂದೆ ಹೋಯಿತು. ದೂರದ ಮರದ ಮೇಲೆ ಕುಳಿತಿದ್ದ ಸುರೇಶ್ ಕರಡಿ ಹೋದ ನಂತರ ಸ್ನೇಹಿತನ ಬಳಿ ಬಂದ.
ಕರಡಿ ನಿನ್ನ ಬಳಿ ಕಿವಿಯಲ್ಲಿ ಏನೋ ಹೇಳ್ತಿತ್ತು ಎಂದು ಕೇಳಿದ? ಹೌದು ಕರಡಿ ನನ್ನ ಕಿವಿಯಲ್ಲಿ ಹೇಳಿತು, ಕೆಟ್ಟ ಸ್ನೇಹಿತರನ್ನು ನಂಬಬೇಡ ಎಂದು ಹೇಳಿದ..
ಸ್ನೇಹಿತರನ್ನು ಆರಿಸುವಾಗ ಗಮನ ಇರಲಿ. ನೀವು ನಿಮ್ಮ 100%ರಷ್ಟು ಪ್ರೀತಿ ನೀಡಿದ್ದರು, ಆ ಕಡೆಯಿಂದ ನಿಮಗೇನು ಸಿಗುತ್ತಿದೆ ನೆನಪಿರಲಿ. ಅತಿಯಾದ ಒಂದು ಕಡೆಯ ಸ್ನೇಹ ಒಳ್ಳೆಯದಲ್ಲ.