RAPE | ಜಾಬ್‌ ವೇಕೆನ್ಸಿ ಇದೆ ಎಂದು ಹೊಟೇಲ್‌ಗೆ ಕರೆತಂದು ಸಾಮೂಹಿಕ ಅತ್ಯಾಚಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರ ಪ್ರದೇಶದಲ್ಲಿ ಕೆಲಸ ಅರಸಿ ಬಂದ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ.

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ, ಜಾಬ್‌ ವೇಕೆನ್ಸಿ ಇದೆ ಎಂದು ಹೇಳಿ ಹೊಟೇಲ್‌ಗೆ ಮಹಿಳೆಯನ್ನು ಕರೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್‌ ಆಗಿದ್ದ ಯುವತಿ, ಅಲ್ಲಿಯೇ ಪರಿಚಯವಾದ ವ್ಯಕ್ತಿಯನ್ನು ನಂಬಿ ಕೆಲಸಕ್ಕೆಂದು ಬಂದಿದ್ದಾರೆ.

ತಂಪು ಪಾನೀಯಕ್ಕೆ ನಿದ್ರೆ ಮಾತ್ರೆ ಬೆರೆಸಿ ಇಬ್ಬರು ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಆಕೆಗೆ ಬ್ಯಾಂಕ್​ನಲ್ಲಿ ಕೆಲಸ ಕೊಡಿಸುವುದಾಗಿ ಕರೆದೊಯ್ದಿದ್ದ, ಆರೋಪಿಯು ತನ್ನ ಸ್ನೇಹಿತನನ್ನು ಕಳುಹಿಸಿ ಉದ್ಯೋಗ ಕೊಡಿಸುವ ಭರವಸೆಯ ಮೇರೆಗೆ ಮಹಿಳೆಯನ್ನು ತನ್ನೊಂದಿಗೆ ಡೆಹ್ರಾಡೂನ್‌ಗೆ ಬರುವಂತೆ ಹೇಳಿದ್ದ ಎನ್ನಲಾಗಿದೆ. ಆದರೆ ಅಲ್ಲಿ ಅವರನ್ನು ಭೇಟಿಯಾಗಿರಲಿಲ್ಲ, ಬಳಿಕ ಅಲ್ಲಿಂದ ಉತ್ತರ ಪ್ರದೇಶದ ಯಾವುದೋ ಒಂದು ಪ್ರದೇಶಕ್ಕೆ ಬರಲು ಹೇಳಿದ್ದರು.

ನಂತರ ಹೋಟೆಲ್​ಗೆ ಕರೆದೊಯ್ದು ತಂಪು ಪಾನೀಯ ನೀಡಿ ಬಳಿಕ ಅತ್ಯಾಚಾರ ಮಾಡಿದ್ದಾರೆ, ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!