ಆಗಾಗ ತಲೆನೋವು ಬರೋದು ಸಾಮಾನ್ಯವಲ್ಲ. ಹೆಚ್ಚು ಜನರಿಗೆ ತಲೆನೋವು ಯಾಕೆ ಬರುತ್ತಿದೆ ಎಂದು ತಿಳಿಯುವುದಿಲ್ಲ. ನಿಮ್ಮ ತಲೆನೋವಿಗೆ ಇದೇ ಕಾರಣ
ದೇಹದಲ್ಲಿ ನೀರಿನ ಅಂಶ ಅಗತ್ಯಕ್ಕಿಂತ ಕಡಿಮೆಯಾದಾಗ ತಲೆನೋವು ಬರುತ್ತದೆ. ಅಂದರೆ ದೇಹವು ನಿರ್ಜಲೀಕರಣಗೊಂಡಾಗ ತೀವ್ರ ತಲೆನೋವು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ಅನೇಕ ಜನರನ್ನು ಕಾಡುವಂತಹ ಸಮಸ್ಯೆ. ದೇಹವು ನಿರ್ಜಲೀಕರಣಗೊಂಡಾಗಲೆಲ್ಲಾ ಅದು ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ.
ಮೊದಲೇ ಹೇಳಿದಂತೆ, ಒತ್ತಡವು ತೀವ್ರ ತಲೆನೋವಿಗೆ ಕಾರಣವಾಗಬಹುದು. ಒತ್ತಡ ಹೆಚ್ಚಾದಾಗ, ಕುತ್ತಿಗೆಯ ಸ್ನಾಯುಗಳು ಬಿಗಿಯಾಗುತ್ತವೆ, ಇದರ ಪರಿಣಾಮವಾಗಿ ತಲೆ ನೋವು ಬರುತ್ತದೆ. ಅತಿಯಾದ ಕೆಲಸ ಇದ್ದಾಗ ಅಥವಾ ಒತ್ತಡದ ಸಂದರ್ಭಗಳನ್ನು ಎದುರಿಸುವಾಗ ಈ ರೀತಿಯ ತಲೆನೋವು ಉಂಟಾಗುತ್ತದೆ.
ನಿದ್ರೆ ಸರಿಯಾಗಿ ಆಗದಿದ್ದರೂ ತಲೆ ನೋವು ಬರುತ್ತದೆ. ಸರಿಯಾದ ವಿಶ್ರಾಂತಿ ಸಿಗದಿದ್ದಾಗ ಅಥವಾ ನಿದ್ರೆ ಸರಿಯಾಗಿ ಆಗದಿದ್ದಾಗ, ತಲೆನೋವಿನಿಂದ ಬಳಲುತ್ತಾರೆ.
ತಲೆನೋವಿಗೆ ಸೈನಸ್ ಅಥವಾ ಅಲರ್ಜಿ ಕೂಡ ಕಾರಣವಾಗಬಹುದು. ಈ ನೋವು ಹೆಚ್ಚಾಗಿ ತಲೆಯ ಹಿಂಭಾಗದಲ್ಲಿ ಕಂಡುಬರುತ್ತದೆ. ಇದು ಸೈನಸ್ ನೋವಾಗಿದ್ದರೆ, ಕಣ್ಣಿನಿಂದ ಹಿಡಿದು ತಲೆಯ ಹಿಂಭಾಗದ ವರೆಗೆ ತೀವ್ರವಾದ ನೋವಿರುತ್ತದೆ. ಸೋಂಕು ಅಥವಾ ಅಲರ್ಜಿಗಳಿಂದಾಗಿದ್ದರೆ ಮೂಗಿನ ಮಾರ್ಗಗಳು ಮುಚ್ಚಿಹೋಗುವುದು ಮತ್ತು ಮೂಗಿನಲ್ಲಿ ತೀವ್ರವಾದ ನೋವು ಮುಂತಾದ ಲಕ್ಷಣಗಳನ್ನು ಸಹ ಕಾಣಬಹುದು.
ಬೆನ್ನುಹುರಿ ಮತ್ತು ಕುತ್ತಿಗೆಯ ನರಗಳಲ್ಲಿ ಸಮಸ್ಯೆಗಳಿದ್ದಾಗ, ತೀವ್ರ ತಲೆನೋವು ಬರುವ ಸಾಧ್ಯತೆ ಇರುತ್ತದೆ. ಇದನ್ನು ಸರ್ವಿಕೋಜೆನಿಕ್ ತಲೆನೋವು ಎಂದು ಕರೆಯಲಾಗುತ್ತದೆ.