Health | ಉಗುರುಗಳ ಮೇಲೆ ಬಿಳಿ, ಕಪ್ಪು ಗೆರೆಗಳು ಕಾಣಿಸ್ತಿದ್ಯಾ? ಕಾರಣವೇನು? ಆರೋಗ್ಯದ ಎಚ್ಚರಿಕೆನಾ.. ಸಾಮಾನ್ಯ ಲಕ್ಷಣನಾ?

ಕೈಗಳ ಸೌಂದರ್ಯಕ್ಕೆ ಮುಖ್ಯವಾದ ಉಗುರುಗಳು ಕೆಲವೊಮ್ಮೆ ಬಣ್ಣ ಬದಲಾಯಿಸಬಹುದು. ಕಪ್ಪು ಅಥವಾ ಬಿಳಿ ಗೆರೆಗಳು ಬರೋದು ಅಥವಾ ಮುರಿಯುವುದು ಸಾಮಾನ್ಯ ಅನ್ಕೋಬಹುದು. ಆದರೆ ಕೆಲವೊಮ್ಮೆ ಇದು ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು. ಸ್ವಚ್ಛ ಉಗುರುಗಳು ಆರೋಗ್ಯದ ಪ್ರತಿಬಿಂಬವಾಗಿದ್ದು, ಯಾವುದೇ ಬದಲಾವಣೆ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.

ವಯಸ್ಸಾಗುತ್ತಿರುವಾಗ ಬದಲಾವಣೆ ಆಗೋದು ನಾರ್ಮಲ್
ಹೆಚ್ಚಾಗಿ ವಯಸ್ಸಾದ ಮೇಲೆ ನಮ್ಮ ಉಗುರುಗಳಲ್ಲಿ ನೈಸರ್ಗಿಕ ಬದಲಾವಣೆಗಳು ಆಗ್ತಾವೆ. ಈ ಲೈನ್‌ಗಳು ಅದರ ಒಂದು ಭಾಗ ಎನ್ನಬಹುದು. ವಯಸ್ಸು ಹೆಚ್ಚಾದಂತೆ ದೇಹದ ಪೌಷ್ಟಿಕ ಶಕ್ತಿಯ ಬದಲಾವಣೆಗಳು ಉಗುರುಗಳ ಮೇಲೂ ಕಾಣಿಸುತ್ತವೆ.

Black Line on Nail: Causes and When To Seek Care

ಪೋಷಕಾಂಶಗಳ ಕೊರತೆಯಾದ್ರೆ
ಹೌದು, ವಿಟಮಿನ್‌ B12 ಅಥವಾ ಆಯರನ್ ಕೊರತೆಯಿದ್ದರೆ ಉಗುರುಗಳು ಹಾಳಾಗೋದು ಕಾಮನ್. ಕೆಲವೊಮ್ಮೆ ಹಳದಿ ಬಣ್ಣಕ್ಕೂ ತಿರುಗಬಹುದು.

White Spots on the Nails: Potential Causes and Treatment

ತ್ವಚೆ ಸಮಸ್ಯೆ ಅಥವಾ ಥೈರಾಯ್ಡ್ ಸಮಸ್ಯೆಯ ಸಂಕೇತ
ಕೆಲವೊಮ್ಮೆ ಎಸ್ಜಿಮಾ, ಲೈಕನ್ ಪ್ಲಾನಸ್ ಅಥವಾ ಥೈರಾಯ್ಡ್ ಸಮಸ್ಯೆಗಳಿಂದ ಉಗುರುಗಳ ಬಣ್ಣ ಬದಲಾಗುತ್ತವೆ.

Thyroid Problems? | NIH News in Health

ಗಂಭೀರ ಆರೋಗ್ಯ ಸಮಸ್ಯೆಗಳ ಸೂಚನೆಯೂ ಆಗಬಹುದು
ಬಿಳಿ ಲೈನ್‌ಗಳು “ಮೀಸ್ ಲೈನ್ಸ್” ಆಗಿರಬಹುದು, ಕೆಲವೊಮ್ಮೆ ಔಷಧಗಗಳ ಪರಿಣಾಮ ಅಥವಾ ಕಿಡ್ನಿ ಸಮಸ್ಯೆಯ ಸೂಚನೆಯಾಗಿರಬಹುದು. ಕಪ್ಪು ಅಥವಾ ಕಂದು ರೇಖೆಗಳು “ಮೆಲನೋನಿಚಿಯಾ” ಎಂದು ಗುರುತಿಸಲಾಗುತ್ತವೆ, ಇವು ಕೆಲವೊಮ್ಮೆ ಗಂಭೀರ ಆರೋಗ್ಯ ಸಮಸ್ಯೆಗಳ ಸೂಚನೆ ನೀಡಬಹುದು.

Black Line on Nail: Causes and When to Worry

ಸಣ್ಣ ಗಾಯ, ಒತ್ತಡ ಅಥವಾ ಔಷಧ ಪರಿಣಾಮ
ಬಾಗಿಲ ಸಂದಿಗೆ ಉಗುರು ಸಿಕ್ಕಾಗ ಅಥವಾ ಉಗುರುಗಳಿಗೆ ಸಣ್ಣ ಸಣ್ಣ ಗಾಯವಾದಾಗ, ತಕ್ಷಣ ಪರಿಣಾಮವಿಲ್ಲದಿದ್ದರೂ ಕೆಲವು ದಿನಗಳ ಬಳಿಕ ಬಿಳಿ ಗೆರೆಗಳು ಕಾಣುತ್ತವೆ. ಇದನ್ನು “ಮೈಕ್ರೋಟ್ರಾಮಾ” ಎಂದು ಕರೆಯಲಾಗುತ್ತದೆ.

Medication side effects: What are your options? - Harvard Health

ಉಗುರುಗಳು ಸಣ್ಣ ಸಂಗತಿಯಂತೆ ಕಾಣಿಸಬಹುದು ಆದರೆ ನಮ್ಮ ಒಳಗಿನ ಆರೋಗ್ಯದ ಬಗ್ಗೆ ಬಹಳವಷ್ಟನ್ನು ಹೇಳುತ್ತವೆ. ನಾವೆಂದಾದರೂ ಇದೇನೋ ನೆಲ್ ಪೆಂಟ್ ಗ್ಲಿಚ್ ಅಂತ ಬಿಟ್ಟ್ರೆ, ಕೆಲವೊಮ್ಮೆ ನಮ್ಮದೇ ತಪ್ಪು. ಮುಂದಿನಿಂದ ಇಂಥದ್ದೆನ್ನಿದ್ರು ಚೆಕ್ ಮಾಡಿಸೋಣ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!