Wednesday, September 24, 2025

Health | ಸಾಫ್ಟ್​ ಡ್ರಿಂಕ್ಸ್​ ಕುಡಿಯೋ ಮುಂಚೆ ತಪ್ಪದೆ ಈ ಸುದ್ದಿ ಓದಿ!

ಇಂದಿನ ವೇಗದ ಜೀವನ ಶೈಲಿಯಲ್ಲಿ ಸಾಫ್ಟ್ ಡ್ರಿಂಕ್ಸ್‌ಗಳು ಎಲ್ಲೆಡೆ ಹೆಚ್ಚು ಜನಪ್ರಿಯವಾಗಿದೆ. ಮಕ್ಕಳು, ಯುವಕರು ಕೂಡ ಇದನ್ನು ಹೆಚ್ಚಾಗಿ ಸೇವಿಸುತ್ತಿದ್ದಾರೆ. ತಂಪು, ಸಿಹಿ ಮತ್ತು ಸುಲಭವಾಗಿ ಸಿಗೋದ್ರಿಂದ ಹಲವರು ಇದನ್ನು ಡೈಲಿ ಕುಡಿತಾರೆ. ಆದರೆ, ಇದರ ನಿಯಮಿತ ಅಥವಾ ಅಧಿಕ ಸೇವನೆಯು ಆರೋಗ್ಯದ ಮೇಲೆ ಹಲವಾರು ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು.

  • ಹಲ್ಲುಗಳ ಆರೋಗ್ಯ: ಸಾಫ್ಟ್ ಡ್ರಿಂಕ್ಸ್‌ನಲ್ಲಿ ಅಧಿಕ ಪ್ರಮಾಣದ ಸಕ್ಕರೆ ಇರುವುದರಿಂದ ಹಲ್ಲುಗಳಲ್ಲಿ ಕ್ಯಾರೀಸ್, ಪ್ಲಾಕ್ ಉಂಟಾಗುತ್ತದೆ.
  • ತೂಕ ಹೆಚ್ಚುವುದು: ಹೆಚ್ಚುವರಿ ಸಕ್ಕರೆ ಮತ್ತು ಕ್ಯಾಲೊರಿಗಳು ದೇಹದ ತೂಕ ಹೆಚ್ಚಲು ಕಾರಣವಾಗುತ್ತವೆ. ಈ ಮೂಲಕ ಬೊಜ್ಜು ಅಥವಾ ಮಧುಮೇಹದ ಖಾಯಿಲೆಯನ್ನು ಹೆಚ್ಚಿಸಬಹುದು.
  • ಹೃದಯ ರೋಗದ ಅಪಾಯ: ಅಧಿಕ ಸಕ್ಕರೆ ಮತ್ತು ಫಾಸ್ಫೋರಿಕ್ ಆಸಿಡ್ ಹೃದಯ ಸಂಬಂಧಿ ಸಮಸ್ಯೆ, ಕೊಲೆಸ್ಟ್ರಾಲ್ ಹೆಚ್ಚಳ ಹಾಗೂ ರಕ್ತದೊತ್ತಡ ಏರಿಕೆಗಳಿಗೆ ಕಾರಣವಾಗಬಹುದು.
  • ಡಿಹೈಡ್ರೆಷನ್ ಸಮಸ್ಯೆಗಳು: ಸೋಡಾ ಹೈಡ್ರೇಶನ್ ಅನ್ನು ಕಡಿಮೆ ಮಾಡಬಹುದು, ಡಿಹೈಡ್ರೆಷನ್ (dehydration) ಅಥವಾ ಕಿಡ್ನಿ ಸಂಬಂಧಿ ಸಮಸ್ಯೆಗಳಿಗೆ ಉಂಟಾಗಬಹುದು.

ಇದನ್ನೂ ಓದಿ