Health Care | ಮೈಗ್ರೇನ್ – ತಲೆನೋವಿಗೆ ವ್ಯತ್ಯಾಸ ಇದ್ಯಾ? ಇದೇ ಸಮಸ್ಯೆ ಅಂತ ಪತ್ತೆ ಹಚ್ಚೋದು ಹೇಗೆ?

ತಲೆನೋವು ಪ್ರಸ್ತುತ ದಿನಗಳಲ್ಲಿ ಎಲ್ಲರೂ ಕಾಡುತ್ತಿರುವ ಸಮಸ್ಯೆ. ಒತ್ತಡ, ನಿದ್ರೆ, ಹೊಟ್ಟೆ ಖಾಲಿ ಇದ್ದಾಗ, ನೀರು ಕಡಿಮೆ ಕುಡಿದಾಗ.. ಇಷ್ಟೆಲ್ಲ ಕಾರಣದಿಂದ ಕೆಲವರಿಗೆ ತಲೆ ತುಂಬಾ ನೋವು ಆಗ್ತದೆ. ಕೆಲವರು ಮಾತ್ರೆ ಕುಡಿದು ಕಡಿಮೆ ಮಾಡ್ಕೋತಾರೆ. ಆದರೆ ತಲೆನೋವು ಪದೇಪದೇ ಆಗ್ತಾ ಇದ್ರೆ ಇದು ಸಾಮಾನ್ಯವೋ ಅಥವಾ ಮೈಗ್ರೇನ್ ನೋ ?” ಅನ್ನೋ ಅನುಮಾನ ಇತ್ತೀಚೆಗೆ ಅನೇಕರಲ್ಲಿ ಕಾಣಿಸಿಕೊಳ್ಳುತ್ತಿದೆ.

ಏಕೆಂದರೆ ತೀವ್ರ ತಲೆನೋವಿಗೆ ನಾವೆಲ್ಲ “ಮೈಗ್ರೇನ್” ಅಂತಲೇ label ಹಾಕಿದ್ರೂ, ತಜ್ಞರ ಪ್ರಕಾರ ಮೈಗ್ರೇನ್ ಸಾಮಾನ್ಯ ತಲೆನೋವಿಗಿಂತ ಸಂಪೂರ್ಣ ಭಿನ್ನವಾದ ಒಂದು ನರವೈಜ್ಞಾನಿಕ ಸಮಸ್ಯೆ. ಇದು ಸರಿಯಾದ ಚಿಕಿತ್ಸೆಗೆ ಒಳಪಡದಿದ್ದರೆ ದಿನಚರ್ಯೆಗೆ ಸಾಕಷ್ಟು ತೊಂದರೆ ಕೊಡಬಲ್ಲದು.

ಮೈಗ್ರೇನ್ ಎಂದರೇನು?
ಮೈಗ್ರೇನ್ ಎಂದರೆ ಕೇವಲ ತಲೆನೋವಲ್ಲ, ಇದು ಒಂದು ನರವೈಜ್ಞಾನಿಕ ಅಸ್ವಸ್ಥತೆ. ಸಾಮಾನ್ಯ ತಲೆನೋವು ಕೆಲವೊಮ್ಮೆ ಬೆಳಕು ಅಥವಾ ಶಬ್ದದಿಂದ ಉಂಟಾಗಬಹುದು, ಆದರೆ ಮೈಗ್ರೇನ್‌ ನೋವು ಬಹುಶಃ ತಲೆಯ ಒಂದು ಬದಿಯಲ್ಲಿ ತೀವ್ರ ಮಿಡಿಯುವ ರೀತಿಯ ತಲೆನೋವನ್ನ ಉಂಟುಮಾಡುತ್ತದೆ. ಕೆಲವೊಮ್ಮೆ ಎರಡೂ ಬದಿಗಳಿಗೆ ಅಥವಾ ತಲೆಯ ಹಿಂಭಾಗಕ್ಕೂ ಈ ನೋವು ಹರಡಬಹುದು.

ಮೈಗ್ರೇನ್‌ನ ಪ್ರಮುಖ ಲಕ್ಷಣಗಳು:

ತೀವ್ರ ಮಿಡಿಯುವ ರೀತಿಯ ತಲೆನೋವು

ಬೆಳಕು, ಶಬ್ದ ಮತ್ತು ಗಂಧಗಳಿಗೆ ತೀವ್ರ ಸೆನ್ಸಿಟಿವಿಟಿ

ವಾಕರಿಕೆ ಅಥವಾ ವಾಂತಿ

ಮನಸ್ಥಿತಿಯಲ್ಲಿ ಏರುಪೇರು

ಕಣ್ಣುಗಳ ಮುಂದೆ ಚುಕ್ಕೆಗಳು, ಹೊಳಪು, ಅಥವಾ ದೃಷ್ಟಿ ತೊಂದರೆಗಳು (Aura)

ನಿದ್ರೆಯ ತೊಂದರೆ ಮತ್ತು ದೈಹಿಕ ಆಯಾಸ

ಈ ಲಕ್ಷಣಗಳು ಎಲ್ಲರಲ್ಲಿಯೂ ಒಂದೇ ರೀತಿಯಲ್ಲಿಲ್ಲ. ಕೆಲವೊಮ್ಮೆ ನೋವು ಪ್ರಾರಂಭವಾಗುವ ಮೊದಲು ದೃಷ್ಟಿ ಸಮಸ್ಯೆಗಳಂತೆ ಎಚ್ಚರಿಕೆ ಲಕ್ಷಣಗಳು ಕಾಣಿಸಬಹುದು.

ಈ ಸಂದರ್ಭಗಳಲ್ಲಿ ತಡಮಾಡದೇ ವೈದ್ಯರನ್ನು ಸಂಪರ್ಕಿಸಿ:

ತಲೆನೋವು ಪದೇಪದೇ ಬರುತ್ತಿದ್ದರೆ

ನೋವು ಮೂರು ದಿನಕ್ಕಿಂತ ಹೆಚ್ಚು ಕಾಲ ಮುಂದುವರೆದರೆ

ವ್ಯಾಯಾಮ, ಉಸಿರಾಟ, ಅಥವಾ ಜ್ವರದ ನಂತರ ತಲೆನೋವು ಉಲ್ಭಣವಾದರೆ

ಕತ್ತು ಹಿಡಿತ, ಜ್ವರ, ತೀವ್ರ ಶಾರೀರಿಕ ನೋವಿನೊಂದಿಗೆ ತಲೆನೋವು ಕಂಡುಬಂದರೆ

ಗರ್ಭಧಾರಣೆಯ ಸಂದರ್ಭದಲ್ಲಿ ತಲೆನೋವು ಕಾಣಿಸಿಕೊಂಡರೆ

ಮೈಗ್ರೇನ್ ಕೇವಲ ತಲೆನೋವಲ್ಲ, ಅದು ಬದುಕಿನ ಗುಣಮಟ್ಟವನ್ನೇ ಕೆಡಿಸುವಂತಹ ಗಂಭೀರ ಸಮಸ್ಯೆ. ಆದ್ದರಿಂದ, ತೀವ್ರ ತಲೆನೋವಿದ್ದರೆ ಖಚಿತವಾದ ತಪಾಸಣೆಗೆ ಒಳಪಡಿಸಿ, ವೈದ್ಯರ ಸಲಹೆ ಪಡೆಯುವುದು ಬಹಳ ಮುಖ್ಯ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!