ಬಿಳಿ ರಕ್ತ ಕಣಗಳು ನಮ್ಮ ದೇಹದ ರಕ್ಷಣಾ ವ್ಯವಸ್ಥೆಯ ಪ್ರಮುಖ ಭಾಗ. ದೇಹಕ್ಕೆ ಯಾವುದೇ ಸೋಂಕು ಅಥವಾ ರೋಗಾಣುಗಳು ಪ್ರವೇಶಿಸಿದರೆ, ಅವುಗಳ ವಿರುದ್ಧ ಹೋರಾಡುವುದು ಈ ಬಿಳಿ ರಕ್ತ ಕಣಗಳ ಕೆಲಸ.
ಬಿಳಿ ರಕ್ತ ಕಣಗಳು ದೇಹಕ್ಕೆ ಹಾನಿಕಾರಕವಾದ ಬ್ಯಾಕ್ಟೀರಿಯಾ, ವೈರಸ್, ಶಿಲೀಂಧ್ರ ಮತ್ತು ಪರಾವಲಂಬಿಗಳನ್ನು ಗುರುತಿಸಿ ಅವುಗಳನ್ನ ನಾಶಪಡಿಸುತ್ತವೆ. ದೇಹದಲ್ಲಿರುವ ಹಾನಿಗೊಳಗಾದ ಅಥವಾ ಸತ್ತ ಜೀವಕೋಶಗಳನ್ನ ತೆಗೆದುಹಾಕಿ, ಹೊಸ ಜೀವಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಕೆಲವು ಬಿಳಿ ರಕ್ತ ಕಣಗಳು ಪ್ರತಿರೋಧಕ ಶಕ್ತಿಯನ್ನು ಉತ್ಪಾದಿಸುತ್ತವೆ. ಒಟ್ಟಿನಲ್ಲಿ, ಬಿಳಿ ರಕ್ತ ಕಣಗಳು ನಮ್ಮ ದೇಹವನ್ನ ಸೋಂಕುಗಳು ಮತ್ತು ರೋಗಗಳಿಂದ ರಕ್ಷಿಸಿ, ಆರೋಗ್ಯವಾಗಿರಲು ಬಹಳ ಮುಖ್ಯ. ಇವುಗಳ ಕೊರತೆ ಉಂಟಾದರೆ, ರೋಗಗಳಿಗೆ ಸುಲಭವಾಗಿ ತುತ್ತಾಗುವ ಸಾಧ್ಯತೆ ಇದೆ.
ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳು ಸೇವಿಸಿ:
ನೆಲ್ಲಿಕಾಯಿ
ಕಿತ್ತಳೆ
ನಿಂಬೆ
ಪಪ್ಪಾಯಿ
ಕ್ಯಾಪ್ಸಿಕಂ
ಬ್ರೊಕೊಲಿ
ಬೆಳ್ಳುಳ್ಳಿ
ಶುಂಠಿ
ಮೊಸರು
ಬಾದಾಮಿ
ಸೂರ್ಯಕಾಂತಿ ಬೀಜಗಳು
ಹಸಿರು ಎಲೆ ತರಕಾರಿಗಳು:
ಪಾಲಕ್
ಮೆಂತ್ಯ
ಮೀನು
ಚಿಕನ್