ಬಾಳೆಹಣ್ಣಿನಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ. ಖಾಲಿ ಹೊಟ್ಟೆಯಲ್ಲಿ ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟ ತಕ್ಷಣ ಹೆಚ್ಚಾಗಬಹುದು. ಇದು ಕೆಲವರಿಗೆ ಆಯಾಸ, ತೂಕಡಿಕೆ ಉಂಟುಮಾಡಬಹುದು. ಮಧುಮೇಹ ಇರುವವರಿಗೆ ಇದು ಹೆಚ್ಚು ಗಮನಿಸಬೇಕಾದ ವಿಷಯ.
ಬಾಳೆಹಣ್ಣು ಆಮ್ಲೀಯ ಗುಣಗಳನ್ನು ಹೊಂದಿದೆ. ಖಾಲಿ ಹೊಟ್ಟೆಯಲ್ಲಿ ತಿಂದರೆ ಕೆಲವರಿಗೆ ಹೊಟ್ಟೆಯಲ್ಲಿ ಉರಿ ಅಥವಾ ಆಮ್ಲೀಯತೆ ಉಂಟಾಗಬಹುದು.
ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಹೆಚ್ಚಿರುತ್ತದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಆದರೆ, ಖಾಲಿ ಹೊಟ್ಟೆಯಲ್ಲಿ ತಿಂದಾಗ ದೇಹದಲ್ಲಿ ಪೊಟ್ಯಾಸಿಯಮ್ ಮಟ್ಟ ಅತಿಯಾದರೆ ಕೆಲವೊಮ್ಮೆ ತೊಂದರೆಯಾಗಬಹುದು.
ಬಾಳೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವ ಬದಲು, ಇತರ ಆಹಾರಗಳೊಂದಿಗೆ ಸೇರಿಸಿ ತಿನ್ನುವುದು ಉತ್ತಮ. ಉದಾಹರಣೆಗೆ, ಓಟ್ಸ್, ಡ್ರೈ ಫ್ರೂಟ್ಸ್ ಜೊತೆಗೆ ತಿನ್ನಬಹುದು. ಬಾಳೆಹಣ್ಣು ಮಲಬದ್ದತೆಯನ್ನು ಕಡಿಮೆಮಾಡಲು ಸಹಾಯಮಾಡುತ್ತದೆ. ಪ್ರತಿ ದೇಹವು ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ, ಹಾಗಾಗಿ ಕೆಲವರಿಗೆ ಯಾವುದೇ ತೊಂದರೆ ಆಗದೆ ಇರಬಹುದು.