ಗಂಟಲು ನೋವು, ಬಾಯಿಯ ದುರ್ವಾಸನೆ ಅಥವಾ ಶೀತ ಕೆಮ್ಮು ಬಂದಾಗ ಮನೆಯವರು ಸದಾ ಶಿಫಾರಸು ಮಾಡುವ ಮನೆಮದ್ದು ಅಂದ್ರೆ ಉಪ್ಪು ನೀರಿನಿಂದ ಬಾಯಿ ತೊಳೆಯುವುದು. ಈ ವಿಧಾನವು ತುಂಬಾ ಹಳೆಯದು ಆದರೆ ಪರಿಣಾಮಕಾರಿ. ಸಾಮಾನ್ಯವಾಗಿ ಮಲಗುವ ಮುನ್ನ ಅಥವಾ ಬೆಳಿಗ್ಗೆ ಬಾಯಿ ತೊಳೆಯುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು.
ಬಾಯಿಯ ದುರ್ವಾಸನೆ ನಿವಾರಣೆ:
ಬಾಯಿಯಿಂದ ಬರುವ ದುರ್ವಾಸನೆ ಹಲವರಿಗೆ ನಾಚಿಕೆಗೆ ಕಾರಣವಾಗಬಹುದು. ಇದಕ್ಕಾಗಿ ದುಬಾರಿ ಮೌತ್ ಫ್ರೆಶ್ನರ್‌ಗಳನ್ನು ಬಳಸುವ ಬದಲು ಉಪ್ಪು ನೀರಿನಿಂದ ಬಾಯಿ ತೊಳೆಯುವುದು ಹೆಚ್ಚು ಪರಿಣಾಮಕಾರಿ. ಉಪ್ಪಿನಲ್ಲಿ ಇರುವ ಬ್ಯಾಕ್ಟೀರಿಯಾ ನಾಶಕಾರಿ ಗುಣಗಳಿಂದ ದುರ್ವಾಸನೆಯು ದೂರವಾಗುತ್ತದೆ.
ಗಂಟಲು ನೋವಿಗೆ ತ್ವರಿತ ಪರಿಹಾರ:
ಉಗುರುಬೆಚ್ಚಗಿನ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಗಂಟಲು ಉರಿಯೂತ, ತೊಂದರೆ ಮತ್ತು ಶೀತದಿಂದ ಉಂಟಾಗುವ ನೋವಿಗೆ ತ್ವರಿತ ಪರಿಹಾರ ಸಿಗುತ್ತದೆ.
ಬಾಯಿಯ pH ಮಟ್ಟ ಸಮತೋಲನ:
ಉಪ್ಪು ನೀರು ಬಾಯಿಯ ನೈಸರ್ಗಿಕ ತಾಜಾತನವನ್ನು ಕಾಪಾಡುತ್ತದೆ. ಬಾಯಿಯ pH ಲೆವೆಲ್ ಸರಿಯಾಗಿ ಉಳಿದರೆ, ಬಾಯಿಯಲ್ಲಿ ಹುಣ್ಣು, ಉರಿಯೂತ ಅಥವಾ ಇನ್‌ಫೆಕ್ಷನ್ ಆಗುವ ಸಾಧ್ಯತೆ ಕಡಿಮೆಯಾಗುತ್ತದೆ.
ಹಲ್ಲುಗಳ ಆರೋಗ್ಯ ಸಂರಕ್ಷಣೆ:
ಪ್ರತಿ ದಿನ ಬಾಯಿ ತೊಳೆಯುವ ಮೂಲಕ ಹಲ್ಲುಗಳಲ್ಲಿ ಹುಳುಕಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಉಪ್ಪು ನೀರು ಹಲ್ಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಹಲ್ಲು ನೋವಿಗೆ ಸಹ ಉತ್ತಮ ಪರಿಹಾರ ನೀಡುತ್ತದೆ.
ಕಫದ ಸಮಸ್ಯೆ ನಿವಾರಣೆ:
ಶೀತವಾದಾಗ ಕಫ ತೊಂದರೆ ನೀಡುತ್ತಿದ್ದಾರೆ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿದರೆ ಕಫ ಕರಗಿ ಎದೆಯಲ್ಲಿನ ಬಿಗಿತ ಇಳಿಯುತ್ತದೆ. ಈ ಮೂಲಕ ಉಸಿರಾಟ ಸುಲಭವಾಗುತ್ತದೆ.
ಈ ಹಳೆಯ ಮನೆಮದ್ದು ಆರೋಗ್ಯದ ನೂರಾರು ಸಮಸ್ಯೆಗಳಿಗೆ ಪರಿಹಾರ ನೀಡಬಹುದು. ಕೇವಲ ಒಂದು ಚಮಚ ಉಪ್ಪು ಮತ್ತು ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರು ಸಾಕು. ನಿಯಮಿತವಾಗಿ ಪ್ರಯತ್ನಿಸಿ ಫಲಿತಾಂಶವನ್ನು ನೋಡಿ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)