ಇತ್ತೀಚೆಗಿನ ದಿನಗಳಲ್ಲಿ ನಾವು ಎಲ್ಲರೂ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡ್ತಾ ಇದ್ದೀವಿ. ಡಯಟ್, ಫಿಟ್‌ನೆಸ್, ನೆಚುರಲ್ ಫುಡ್ ಈ ಎಲ್ಲವೂ ನಮ್ಮ ದೈನಂದಿನ ಜೀವನದ ಭಾಗವಾಗಿದೆ. ಆದರೆ ಕೆಲವೊಂದು ಹಳೆಯ ಪದ್ದತಿಗಳು ಇವತ್ತಿಗೂ equally powerful. ಹೌದು, ಅದರಲ್ಲಿ ಒಂದು ದೇಸಿ ತುಪ್ಪ!
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ತುಪ್ಪ ಹಾಕಿ ಕುಡಿಯೋದ್ರಿಂದ ಉಂಟಾಗುವ ಆರೋಗ್ಯ ಲಾಭಗಳ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ಸಂಪೂರ್ಣ ಮಾಹಿತಿ.
ಜೀರ್ಣಕ್ರಿಯೆಗೆ ಒಳ್ಳೆಯದು
ತುಪ್ಪದಲ್ಲಿ ಇರುವ ಗುಡ್ ಫ್ಯಾಟ್ ಮತ್ತು ಒಮೆಗಾ-3 ಕೊಬ್ಬುಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ. ಬೆಳಿಗ್ಗೆ ಬಿಸಿ ನೀರಿನಲ್ಲಿ ತುಪ್ಪ ಹಾಕಿ ಕುಡಿದ್ರೆ ಜೀರ್ಣಕ್ರಿಯೆ ಸುಲಭವಾಗುತ್ತದೆ. ಅಜೀರ್ಣ ಸಮಸ್ಯೆಗಳು ನಿಧಾನವಾಗಿ ಕಮ್ಮಿಯಾಗುತ್ತವೆ.
ಮಲಬದ್ಧತೆಯಿಂದ ಮುಕ್ತಿ
ದೇಸಿ ತುಪ್ಪ ಬಿಸಿ ನೀರಿನಲ್ಲಿ ಸೇವಿಸಿದರೆ ದೊಡ್ಡ, ಸಣ್ಣ ಕರುಳುಗಳ ಚಲನೆ ಸಹಜವಾಗುತ್ತದೆ. constipation issue ಇದ್ರೆ ಇದು home remedy ಲೆವೆಲ್ ಟ್ರೀಟ್‌ಮೆಂಟ್!
ಕಣ್ಣು ಮತ್ತು ಚರ್ಮದ ಆರೋಗ್ಯಕ್ಕೆ ಸಹಕಾರ
ದಿನಾ ಬಿಸಿ ನೀರಿನಲ್ಲಿ ತುಪ್ಪ ಹಾಕಿ ಕುಡಿಯುವುದರಿಂದ ಕಣ್ಣುಗಳ ಒಣಗುವಿಕೆ ಕಡಿಮೆಯಾಗುತ್ತದೆ. ತುಪ್ಪದಲ್ಲಿ ಇರುವ ಒಮೆಗಾ-3 ಫ್ಯಾಟಿ ಆಸಿಡ್ ನಿಂದ ಕಣ್ಣಿನ ದೃಷ್ಟಿ ಸುಧಾರಣೆಗೆ ಸಹಾಯ ಮಾಡುತ್ತದೆ. ಜೊತೆಗೆ ಚರ್ಮಕ್ಕೆ ನೈಸರ್ಗಿಕ ಹೊಳಪು ನೀಡುತ್ತದೆ.
ಶೀತ-ಕೆಮ್ಮಿಗೆ ರಾಮಬಾಣ
ಚಳಿಗಾಲದಲ್ಲಿ ಹೆಚ್ಚಾಗುವ ಶೀತ, ಕೆಮ್ಮಿಗೆ ತುಪ್ಪ ಮತ್ತು ಬಿಸಿ ನೀರಿನ ಕಾಂಬೊ ಬೆಸ್ಟ್. ಇದರಿಂದ ಗಂಟಲು, ಮೂಗು ಬ್ಲಾಕ್ ಇತ್ಯಾದಿ ಸಮಸ್ಯೆಗಳು ಕಡಿಮೆಯಾಗುತ್ತವೆ. immunity ಕೂಡಾ build ಆಗ್ತದೆ. especially ಮಕ್ಕಳಿಗೆ ಇದು ಉತ್ತಮ.
ಹೇಗೆ ಕುಡಿಯಬೇಕು? ಸರಳ ವಿಧಾನ ಇಲ್ಲಿದೆ!
ಪ್ರತಿದಿನ ಬೆಳಿಗ್ಗೆ ಎದ್ದು 1 ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ 1 ಟೀ ಚಮಚ ದೇಸಿ ತುಪ್ಪ ಸೇರಿಸಿ ಕುಡಿಯಿರಿ. ದಿನ ಶುಭವಾಗುತ್ತದೆ, ಆರೋಗ್ಯವೂ ಚೆನ್ನಾಗಿರುತ್ತದೆ.