January22, 2026
Thursday, January 22, 2026
spot_img

HEALTH | ಚಳಿಗಾಲದಲ್ಲಿ ನೆಲ್ಲಿಕಾಯಿ ತಿನ್ನೋದ್ರಿಂದ ಏನೆಲ್ಲಾ ಆರೋಗ್ಯ ಲಾಭ ಇದೆ ಗೊತ್ತಾ?

ಚಳಿಗಾಲ ಬಂದಾಗ ದೇಹದ ತಾಪಮಾನ ಮಾತ್ರ ಕಡಿಮೆಯಾಗುವುದಿಲ್ಲ, ರೋಗನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ. ಇದೇ ಸಮಯದಲ್ಲಿ ಪ್ರಕೃತಿಯಲ್ಲಿ ಸಿಗುವ ಸೂಪರ್‌ಫುಡ್ ಒಂದು ಎಲ್ಲರಿಗೂ ಸಿಗುತ್ತೆ ಅದು ನೆಲ್ಲಿಕಾಯಿ. ಸಣ್ಣ ಕಾಯಿ ಆದರೆ ದೊಡ್ಡ ಆರೋಗ್ಯ ಶಕ್ತಿ ಹೊಂದಿರುವ ಈ ಆಮ್ಲಾ, ಚಳಿಗಾಲದಲ್ಲಿ ದೇಹವನ್ನು ರಕ್ಷಿಸುವ ನೈಸರ್ಗಿಕ ಗುರಾಣಿ ಎಂದು ವೈದ್ಯರು ಹೇಳುತ್ತಾರೆ.

ನೆಲ್ಲಿಕಾಯಿ ಅಧಿಕ ಪ್ರಮಾಣದ ವಿಟಮಿನ್ C ಹೊಂದಿರುವುದರಿಂದ ಚಳಿಗಾಲದಲ್ಲಿ ಇದನ್ನು ಸೇವಿಸುವುದು ಅತ್ಯುತ್ತಮ. 100 ಗ್ರಾಂ ನೆಲ್ಲಿಕಾಯಿಯಲ್ಲಿ ಸುಮಾರು 100 ಮಿ.ಗ್ರಾಂ ವಿಟಮಿನ್ C ಇರುತ್ತದೆ. ಇದರಿಂದ ದೇಹಕ್ಕೆ ದಿನವಿಡೀ ಬೇಕಾಗುವ ಇಮ್ಯುನಿಟಿ ಬೆಂಬಲ ಲಭ್ಯವಾಗುತ್ತದೆ. ಇದು ಚರ್ಮ, ಕೂದಲು, ಕಣ್ಣುಗಳ ಆರೋಗ್ಯವನ್ನು ಸುಧಾರಿಸುತ್ತದೆ ಹಾಗೂ ವಯಸ್ಸಾಗುವಿಕೆಯನ್ನು ನಿಧಾನಗೊಳಿಸುವ ಶಕ್ತಿಯನ್ನು ಹೊಂದಿದೆ. ಮಧುಮೇಹ, ಕಣ್ಣಿನ ಸಮಸ್ಯೆಗಳು ಮತ್ತು ಒಬೆಸಿಟಿ ನಿಯಂತ್ರಣಕ್ಕೂ ನೆಲ್ಲಿಕಾಯಿ ಉಪಯುಕ್ತ.

  • ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ವಿಟಮಿನ್ C ಯಿಂದ ದೇಹದ ರಕ್ಷಣಾ ಸಾಮರ್ಥ್ಯ ಹೆಚ್ಚಾಗಿ ಶೀತ-ಕೆಮ್ಮಿನ ಅಪಾಯ ಕಡಿಮೆಯಾಗುತ್ತದೆ.
  • ಜೀರ್ಣಕ್ರಿಯೆ ಸುಧಾರಣೆ: ಮಲಬದ್ಧತೆ ನಿಯಂತ್ರಿಸಿ ಜೀರ್ಣತಂತ್ರ ಸುಗಮಗೊಳಿಸುತ್ತದೆ.
  • ಕಣ್ಣಿನ ಆರೈಕೆ: ದೃಷ್ಟಿ ಶಕ್ತಿಯನ್ನು ಬೆಂಬಲಿಸಿ ಕಣ್ಣಿನ ಕಾಯಿಲೆಗಳಿಗೆ ತಡೆಯಾಗಿ ಕೆಲಸ ಮಾಡುತ್ತದೆ.
  • ಕೊಲೆಸ್ಟ್ರಾಲ್ ನಿಯಂತ್ರಣ: ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯದ ಆರೋಗ್ಯ ಕಾಪಾಡುತ್ತದೆ.

Must Read